ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸರಕಾರದ ಆದೇಶದಂತೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಇದರ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಮಂಗಳೂರು ಪರಿಸರ ಅಧಿಕಾರಿಯವರ ಕಾರ್ಯಾಚರಣೆ ಸಭೆಯಲ್ಲಿ ತೀರ್ಮಾನಿಸಿದಂತೆ ಅನೇಕ ಬಾರಿ ಪ್ಲಾಸ್ಟಿಕ್ ಏಜೆಂಟರಿಗೆ ಅಂಗಡಿಗಳಿಗೆ ವಿತರಣೆ ಮಾಡಬಾರದಂತೆ ಸೂಚಿಸಿದರು ಕೂಡ ಬಹಿರಂಗವಾಗಿ ಪ್ಲಾಸ್ಟಿಕ್ ವಿತರಿಸುವುದನ್ನು ತಿಳಿದುಕೊಂಡು ಸಾರ್ವಜನಿಕರ ಮಾಹಿತಿಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಏಜೆಂಟ್ ರೊಬ್ಬರಿಗೆ ರೂ. 1500.00 ದಂಡನೆಯನ್ನು ವಿಧಿಸಿದ್ದಾರೆ. ಮತ್ತೆ ಪುನಹ ಮಾರಾಟ ಮಾಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ಏಕ ಬಳಕೆಯ ಪ್ಲಾಸ್ಟಿಕ್ ಬದಲಾಗಿ ಕಾಗದದ ಚೀಲಗಳು/ ಲಕೋಟೆಗಳು ಬಟ್ಟೆ ಚೀಲಗಳನ್ನು ವ್ಯಾಪಾರಸ್ಥರಿಗೆ ನೀಡಲು ತಿಳಿಸಲಾಗಿದೆ. ಇದರಿಂದ ಇತರರಿಗೆ ಎಚ್ಚರಿಕೆ ನೀಡಿದಂತಾಗಿದೆ.