32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡಗಾಡು ಓಟ

ಉಜಿರೆ : ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆಯುವ
ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ ಅ.21ರಂದು ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಧನರಾಜ್ ಪಿ.ಎಂ ನೆರವೇರಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುರಾದ ಪ್ರಮೋದ್ ಕುಮಾರ್. ಬಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.

ಮುಖ್ಯ ಅಬ್ಯಾಗತರಾದ ವಿನಯಚಂದ್ರ ಆಳ್ವ ಗಸ್ತು ವನಪಾಲಕ ಅರಣ್ಯ ಇಲಾಖೆ ಬೆಳಾಲು ಇವರ ಅಭ್ಯಾಗತದಲ್ಲಿ ನೆರವೇರಿತು. ನಿವೃತ್ತ ಪ್ರಾಂಶುಪಾಲರು ಪ್ರೊ. ಎನ್ ದಿನೇಶ್ ಚೌಟ ವಹಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.


ಜಿಲ್ಲಾ ಕ್ರೀಡಾ ಸಂಯೋಜಕರು ಅರುಣ್ ಡಿಸೋಜಾ, ಉಪಪ್ರಾಂಶುಪಾಲರಾದ ರಾಜೇಶ್ , ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್, ನವೀನ್ ಜೈನ್ ಪದವಿಪೂರ್ವ ಕಾಲೇಜ್ ಮೂಡಬಿದ್ರೆ ಉಪಸ್ಥಿತರಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮ ವನ್ನು ಸಂದೇಶ್ ಪೂಂಜಾ ದೈಹಿಕ ಶಿಕ್ಷಣ ಉಪನ್ಯಾಸಕರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಹಾವೀರ್ ಜೈನ್ ಹಾಗೂ ಸ್ವಾಗತವನ್ನು ದೀಕ್ಷಿತ್ ರೈ ನೆರವೇರಿಸಿದರು. ಧನ್ಯವಾದ ಕಾರ್ಯಕ್ರಮವನ್ನು ಸುನಿಲ್ ಪಿ.ಜೆ ಇವರು ನೆರವೇರಿಸಿದರು.

ಬಾಲಕರ ವಿಭಾಗದಲ್ಲಿ ಒಟ್ಟು 10 ಕಾಲೇಜುಗಳು ಭಾಗವಹಿಸಿ, 46 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಒಟ್ಟು 7 ಕಾಲೇಜುಗಳು ಭಾಗವಹಿಸಿ 36 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಬಾಲಕರ ವಿಭಾಗದಲ್ಲಿ ಮೊದಲ 6 ಸ್ಪರ್ಧಿಗಳು ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಬಾಲಕರ ವಿಭಾಗದಲ್ಲಿ ಯಶವಂತ್ ಕೆ, ಚಿರೇಶ್ ಗೌಡ, ರಘುವೀರ ಆಳ್ವಾಸ್ ಕಾಲೇಜು ಮೂಡಬಿದ್ರೆ ಪ್ರಥಮ ಸ್ಥಾನ,
ಆದಿತ್ಯ ಎ ನ್. ಪೀ ಹಾಗೂ ನಿತಿನ್ ಯು. ಎಲ್ ಉಜಿರೆ ದ್ವಿತೀಯ ಸ್ಥಾನ ಹಾಗೂ ಶ್ರಾವಣ ಕೆ. ಪಿ ಸೈಂಟ್ ಫಿಲೋಮಿನಾ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಿತ್ರ ಟಿ. ಪಿ ಗೀತಾ ಬಿ ಆಳ್ವಾಸ್ ಕಾಲೇಜು, ದ್ವಿತೀಯ ಸ್ಥಾನ ಶ್ರದ್ದಾ ಎಸ್ ಎಸ್ ಪಿಯು ಕಾಲೇಜು ಸುಬ್ರಹ್ಮಣ್ಯ, ತೃತೀಯ ಸ್ಥಾನ ರೀತು ಶ್ರೀ , ಪ್ರಮೀಳಾ ಎಸ್.ಜಿ, ದೀಕ್ಷಿತ ಬೆಥನಿ ಪಿಯುಸಿ ಕಾಲೇಜು ನುಜಿಬಳ್ತಿಲ ಪಡೆದು ಮೊದಲ ಆರು ಸ್ಪರ್ಧಿಗಳು ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಬಾಲಕರ ವಿಭಾಗದಲ್ಲಿ ಪ್ರಥಮ ಆಳ್ವಾಸ್ , ದ್ವಿತೀಯ ಎಸ್ ಡಿ ಎಂ ಕಾಲೇಜು ಉಜಿರೆ, ತೃತೀಯ ಬೆಥನಿ ಪಿಯು ಕಾಲೇಜು ನುಜಿಬಳ್ತಿಲ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಆಳ್ವಾಸ್, ದ್ವಿತೀಯ ಬೆಥನಿ ಪಿಯು ಕಾಲೇಜು ನೂಜಿಬಳ್ತಿಲ, ತೃತೀಯ ಎಸ್ ಡಿ ಎಂ ಪಿಯು ಕಾಲೇಜು ಉಜಿರೆ ಆಯ್ಜೆ ಗೊಂಡಿದ್ದಾರೆ.

Related posts

ರಕ್ತೇಶ್ವರಿಪದವು ಪೌಷ್ಟಿಕಾಹಾರ ಪೋಷಣ್ ಅಭಿಯಾನ

Suddi Udaya

ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ:

Suddi Udaya

ಮಡಂತ್ಯಾರು ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಹಾವೀರ ಬಲ್ಲಾಳ್ ನಿಧನ

Suddi Udaya

ಸೋಲಾರ್ ಟಾರ್ಪಾಲಿನ್ ಶೀಟ್ ಖರೀದಿಗೆ ಸಹಾಯಧನ: ಅರ್ಜಿ ಆಹ್ವಾನ

Suddi Udaya

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಮೇಲಂತಬೆಟ್ಟು: ಮನೆಯ ಮೇಲೆ ಕುಸಿದು ಬಿದ್ದ ಧರೆ: ಮನೆ ಸಂಪೂರ್ಣ ಹಾನಿ

Suddi Udaya
error: Content is protected !!