September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಪದ್ಮುಂಜ ಪ್ಯಾಕ್ಸ್ ಮಹಾಸಭೆ ರೂ. 433.23 ಕೋಟಿ ವ್ಯವಹಾರ, ರೂ.2.17 ಕೋಟಿ ನಿವ್ವಳ ಲಾಭ

ಪದ್ಮುಂಜ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ 49ನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಅಧ್ಯಕ್ಷತೆಯಲ್ಲಿ ಸೆ.14 ರಂದು ಸಂಘದ ರೈತ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಮಾತನಾಡಿ ಕಳೆದ 49 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನಮ್ಮ ಸಂಘವು ಇಂದಿನ ಸ್ಪರ್ಧಾತ್ಮಕ ಪೈಪೋಟಿಯನ್ನು ಇತರ ಬ್ಯಾಂಕುಗಳೊಂದಿಗೆ ಮಾಡಿ ಉತ್ತಮ ಪ್ರಗತಿ ಹೊಂದಿದೆ. ವರ್ಷಾಂತ್ಯದಲ್ಲಿ ಸಂಘವು ರೂ. 6.11 ಕೋಟಿ ಪಾಲು ಬಂಡವಾಳ, ರೂ 39.57 ಕೋಟಿ ಠೇವಣಿ ಹೊಂದಿರುತ್ತದೆ. ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ರೂ. 74.84 ಕೋಟಿ ಹೊರ ಬಾಕಿ ಸಾಲವಿದ್ದು, ವಾರ್ಷಿಕ ರೂ 433.23 ಕೋಟಿ ವ್ಯವಹಾರ ಮಾಡಿ ವರದಿ ವರ್ಷ ರೂ 2.17 ಕೋಟಿ ನಿವ್ವಳ ಲಾಭ ಗಳಿಸಿದ್ದು 13% ಲಾಭಾಂಶ ನೀಡಲಾಗುವುದು ಎಂದು ತಿಳಿಸಿದ ಅವರು ಅಲ್ಲದೇ ಸತತ 33 ವರ್ಷಗಳಿಂದ ಲಾಭ ಪಡೆಯುತ್ತಿದ್ದು ಲೆಕ್ಕಪರಿಶೋಧನೆಯಲ್ಲಿ “ಎ” ಗ್ರೇಡ್ ಪಡೆದಿದೆ. ಈ ಸಾಧನೆಗೆ ಉಪಾಧ್ಯಕ್ಷರ ಹಾಗೂ ನಿರ್ದೇಶಕರುಗಳ ಮಾರ್ಗದರ್ಶನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರ ಕಾರಣ ಎಂದು ಹೇಳಲು ಹರ್ಷವಾಗುತ್ತಿದೆ ಎಂದು ಹೇಳಿದರು.

ಸನ್ಮಾನ:ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಹಾಗೂ ಶೈಕ್ಷಣಿಕ, ಕ್ರೀಡಾ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಉದಯ ಭಟ್ ಕೆ., ನಾರಾಯಣ ಗೌಡ, ಉದಯ ಬಿ.ಕೆ., ಶೀಲಾವತಿ, ಡೀಕಯ್ಯ ಗೌಡ, ದಿನೇಶ್ ನಾಯ್ಕ್, ಪ್ರಭಕರ ಗೌಡ, ಪ್ರಸಾದ್ ಎ., ಚಂದನ್ ಕುಮಾರ್ ಎ, ಮತ್ತು ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.ಉಪಾಧ್ಯಕ್ಷ ಅಶೋಕ್ ಪಿ., ಮಹಾಸಭೆ ತಿಳುವಳಿಕೆ ಪತ್ರ ವಾಚಿಸಿದರು. ನಿರ್ದೇಶಕಿ ಶಾರದಾ ಆರ್.ರೈ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಬಿ. ನಿರೂಪಿಸಿದರು.ಸಿಬ್ಬಂದಿಗಳಾದ ಚಿದಾನಂದ ಗೌಡ, ವಿಠಲ ನೈಕ್, ಜ್ಯೋತಿ, ಮಧುಶ್ರೀ, ಪ್ರೇಕ್ಷಿತ್ ಹೆಚ್ ಯು., ಸ್ಪಂದನ್ ಬಿ., ಪ್ರೀತಮ್ ಸಾಲಿಯಾನ್, ರಾಜವರ್ಮ ಇಂದ್ರ, ಗಣೇಶ್, ರಕ್ಷಿತ್ ಆರ್.ಎಸ್. ಹಾಗೂ ವೀರಪ್ಪ ಸಹಕರಿಸಿದರು.

Related posts

ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆ: ವಿ.ಹಿಂ.ಪ. ಮತ್ತು ಭಜರಂಗದಳ ಕಾರ್ಯಕರ್ತರಿಂದ ಗುರುವಾಯನಕೆರೆಯಲ್ಲಿ ಸಂಭ್ರಮಾಚರಣೆ

Suddi Udaya

ಪುಂಜಾಲಕಟ್ಟೆ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಯಂಸೇವಕರಾಗಿ ಸೇವೆ

Suddi Udaya

ಉಜಿರೆ : ಸಹಕಾರ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ ನಿಧನ

Suddi Udaya

 ಜು. 4 : ವೇಣೂರಿನಲ್ಲಿ ಯಕ್ಷಗಾನ ತರಗತಿ ಆರಂಭ

Suddi Udaya
error: Content is protected !!