April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.28-29 ರಂದು ನಡೆಯಲಿರುವ “ವಿಶ್ವ ಬಂಟರ ಸಮ್ಮೇಳನದ” ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಲ್ಲಿ ಅ.28 ,29 ರಂದು ನಡೆಯಲಿರುವ “ವಿಶ್ವ ಬಂಟರ ಸಮ್ಮೇಳನ”ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅ.21 ರಂದು ನಡೆಯಿತು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಅ.28 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿಯವರ ವೇದಿಕೆಯಲ್ಲಿ "ವಿಶ್ವ ಬಂಟರ ಕ್ರೀಡಾಕೂಟ" ನಡೆಯಲಿದೆ.

ಅ.29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ "ವಿಶ್ವ ಬಂಟರ ಸಾಂಸ್ಕೃತಿಕ ವೈಭವ" ನಡೆಯಲಿದೆ.
 ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ವಲಯ ಸಂಘಗಳ ಅಧ್ಯಕ್ಷರು,ಮಹಿಳಾ ವಿಭಾಗ ಯುವ ವಿಭಾಗ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಭಾಗವಹಿಸಿದ್ದರು.

Related posts

ಬೆಳಾಲು ಗ್ರಾ. ಪಂ. ಅಧ್ಯಕ್ಷರಾಗಿ ವಿದ್ಯಾಶ್ರೀನಿವಾಸ ಹಾಗೂ ಉಪಾಧ್ಯಕ್ಷರಾಗಿ ಗೀತಾ ಅವಿರೋಧ ಆಯ್ಕೆ

Suddi Udaya

ನ್ಯಾಯವಾದಿ ಮೇಲೆ ದಾಳಿ: ಹಿಂದೂ ಜನಜಾಗೃತಿ ಸಮಿತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

Suddi Udaya

ಧರ್ಮಸ್ಥಳ :ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ

Suddi Udaya

ಮುಂಡಾಜೆ :ಯುವ ಸಾಹಿತಿ ಆಪ್ತಿ ಪಟವರ್ಧನ್ ರವರು ಬರೆದ ಜರ್ನಿ ಅಂಡರ್‌ದ ಸ್ಕೈ ಪುಸ್ತಕ ಬಿಡುಗಡೆ

Suddi Udaya

ತೆಂಕಕಾರಂದೂರು: ಪೆರಾಲ್ದರಕಟ್ಟೆ ಮಸೀದಿಯಲ್ಲಿ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಪಿತ್ರ್ ಆಚರಣೆ

Suddi Udaya

ನಾಳ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya
error: Content is protected !!