23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಸಿರಿ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ಮಹಾಸಭೆ

ಪಡಂಗಡಿ : ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಸಿರಿ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ಮಹಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನಕ್ಕೆ ಪಡಂಗಡಿ ಗ್ರಾಮ ಪಂಚಾಯತಿಯ ಅಧ್ಯಕ್ಷ ವಸಂತ ಪೂಜಾರಿ ಗ್ರಾಮಸ್ಥರಿಗೆ ಕರಪತ್ರ ಹಂಚುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವಸಂತಿ ಮತ್ತು ಎಲ್ಲಾ ಸದಸ್ಯರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಫಾನ,ಸಂಜೀವಿನಿ ಮಹಿಳಾ ಒಕ್ಕೂಟದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಪ್ರತಿಮಾ,ವಲಯ ಮೇಲ್ವಿಚಾರಕರಾದ ಜಯಾನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರು ಶ್ರೀಮತಿ ಸುಮನಾ, ತಾಲೂಕು ಆರ್ಥಿಕ ಸಲಹೆಗಾರರಾದ ಶ್ರೀಮತಿ ಉಷಾ, ಇಂಡಸ್ ವಿವಾ ವೆಲ್ ನೆಸ್ ಅಡ್ವೈಸರ್ ಅನ್ನಸ್ಪೀಡಲ್ ಡಿ ಸೋಜ, ಸಮುದಾಯ ಆರೋಗ್ಯ ಅಧಿಕಾರಿ ಕು.ಸಂಧ್ಯಾ,ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು, ಗ್ರಾ.ಪಂ ಸಿಬ್ಬಂದಿಗಳು, ಎಸ್.ಡಿ.ಎಮ್ ಸಮಾಜ ಕಾರ್ಯ ಸ್ನಾತ್ತಕೋತ್ತರ ವಿಭಾಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಆಚಾರ್ಯ ಧರ್ಮಸ್ಥಳಕ್ಕೆ ಭೇಟಿ

Suddi Udaya

ತೋಟತ್ತಾಡಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ದಿನಕರ ನಾಯಕ್ ಬೆಳ್ತಂಗಡಿ ಮಾದರಿ ಶಾಲೆಗೆ ವಗಾ೯ವಣೆ

Suddi Udaya

ವೇಣೂರು: ನಡ್ತಿಕಲ್ಲು ನಿವಾಸಿ ಶೇಕಬ್ಬ ನಿಧನ

Suddi Udaya

ಭಕ್ತರ ಭಕುತಿಯ ಭಾವದಲ್ಲಿ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಜಾತ್ರೋತ್ಸವ ಸಂಪನ್ನ

Suddi Udaya

ಮಿತ್ತಬಾಗಿಲು: ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ಅಪಾರ ಹಾನಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಣಿಯೂರು ವಲಯದ ನೂತನ ಅಧ್ಯಕ್ಷರಾಗಿ ಪ್ರಫುಲ್ಲಚಂದ್ರ ಆಯ್ಕೆ

Suddi Udaya
error: Content is protected !!