29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಭಗವದ್ಗೀತಾ ಅಭಿಯಾನ – 2023: ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆಗಳು

ಬೆಳ್ತಂಗಡಿ: ಶಿರಸಿಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ( ರಿ ) , ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ಆಶ್ರಯದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ನ. 18 ರ ಶನಿವಾರ ಮಧ್ಯಾಹ್ನ 2 ಘಂಟೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.


ತಾಲೂಕು ಮಟ್ಟದ ಆಯಾ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ 2 ರಂದು ಜಿಲ್ಲಾ ಮಟ್ಟದ ಸ್ಪರ್ಧೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಕಂಠಪಾಠಕ್ಕೆ ಶ್ರೀ ಭಗವದ್ಗೀತೆಯ 10 ನೆಯ ಅಧ್ಯಾಯ ಪೂರ್ತಿ ಶ್ಲೋಕಗಳನ್ನು ಹೇಳಲು ಇರುತ್ತದೆ.

ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಗಳ ವಿವರ : 5 ನೇಯ ತರಗತಿಯಿಂದ 7 ನೇಯ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಗೆ 10 ನೆಯ ಅಧ್ಯಾಯದ ಮೊದಲ 20 ಶ್ಲೋಕಗಳು ಇರುತ್ತವೆ ಹಾಗೂ ‘ಭಗವದ್ಗೀತೆಯಿಂದ ಜೀವನ ಸಮೃದ್ಧಿ’ ವಿಷಯದಲ್ಲಿ 5 ನಿಮಿಷ ಅವಧಿಯ ಭಾಷಣ ಸ್ಪರ್ಧೆ ನಡೆಯುತ್ತದೆ.

8 ರಿಂದ 10 ನೆಯ ತರಗತಿ ವಿದ್ಯಾರ್ಥಿಗಳಿಗೆ ಕಂಠಪಾಠ ಸ್ಪರ್ಧೆಗೆ 10 ನೆಯ ಅಧ್ಯಾಯದ ಮೊದಲ 20 ಶ್ಲೋಕಗಳು ಹಾಗೂ ‘ ಭಗವದ್ಗೀತೆಯಿಂದ ಭಾರತಕ್ಕೆ ವಿಶ್ವಮಾನ್ಯತೆ ‘ ವಿಷಯದಲ್ಲಿ 5 ನಿಮಿಷ ಅವಧಿಯ ಭಾಷಣ ಸ್ಪರ್ಧೆ ನಡೆಯುತ್ತದೆ. ಹಾಗೆಯೇ ಲಿಖಿತ ರಸಪ್ರಶ್ನಾ ಸ್ಪರ್ಧೆ ನಡೆಯಲಿದ್ದು , 20 ನಿಮಿಷಗಳಲ್ಲಿ 30 ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು.

ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಠಪಾಠ ಸ್ಪರ್ಧೆಗೆ 10 ನೆಯ ಅಧ್ಯಾಯದ ಮೊದಲ 20 ಶ್ಲೋಕಗಳು ನಿಗದಿಯಾಗಿವೆ ಹಾಗೂ ‘ ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ ‘
ಎಂಬ ವಿಷಯದಲ್ಲಿ 5 ನಿಮಿಷಗಳ ಅವಧಿಯ ಭಾಷಣ ಸ್ಪರ್ಧೆ ನಡೆಯಲಿದೆ.

ಶಾಲಾ / ಕಾಲೇಜು ಮಟ್ಟದ ಸ್ಪರ್ಧೆಯನ್ನು ಮಾಡಿಸಿ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರ ಹೆಸರನ್ನು ಸ್ಪರ್ಧಾ ಸಂಯೋಜಕರಿಗೆ ನವೆಂಬರ್ 15 ರ ಒಳಗೆ ಕೊಡಬೇಕು.

ಹೆಚ್ಚಿನ ವಿವರಗಳಿಗೆ ಬೆಳ್ತಂಗಡಿ ತಾಲೂಕು ಶ್ರೀ ಭಗವದ್ಗೀತಾ ಅಭಿಯಾನದ ಸಂಯೋಜಕರಾದ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ
ಡಾ.ಪ್ರಸನ್ನಕುಮಾರ ಐತಾಳ್ 9964139855 ಇವರನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮಡಂತ್ಯಾರು: ಹೆದ್ದಾರಿಯ ರಸ್ತೆ ಕಾಮಗಾರಿ ಕಳಪೆ: ಸಾರ್ವಜನಿಕರ ಆಕ್ರೋಶ

Suddi Udaya

ಬೆಳ್ತಂಗಡಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ರವರ ಮನೆಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಯಶೋವನ ಭೇಟಿ ಕಾರ್ಯಕ್ರಮ

Suddi Udaya

ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಚಾತುರ್ಮಾಸ್ಯ ವ್ರತ

Suddi Udaya

ಕಣಿಯೂರು ಗ್ರಾಮದ ಪದ್ಮುಂಜ ಪ್ರೌಢ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕೊಕ್ಕಡ ಜೇಸಿಐ ಕಪಿಲಾ ಘಟಕಕ್ಕೆ ವಲಯಾಧ್ಯಕ್ಷರ ಭೇಟಿ, ಘಟಕ ವೆಬ್ ಸೈಟ್ ಲೋಕಾರ್ಪಣೆ

Suddi Udaya
error: Content is protected !!