24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ರಾಯಲ್ ಝೋನ್ ಬ್ಯಾಗ್ಸ್ ಮತ್ತು ಫೂಟ್‌ವೇರ್ ನಲ್ಲಿ ಪ್ರಥಮ ವರ್ಷದ ಸಂಭ್ರಮಾಚರಣೆ: ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಪ್ಪ,ರಾಷ್ಟ್ರ ಪ್ರಶಸ್ತಿ ವಿಜೇತ ಬಿ‌.ಕೆ ದೇವರಾವ್ ಹಾಗೂ ವಿವಿಧ ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಸಂತೆಕಟ್ಟೆ ಕೆ.ಎಸ್. ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ರಾಯಲ್ ಝೋನ್ ಬ್ಯಾಗ್ಸ್ ಮತ್ತು ಫೂಟ್‌ವೇರ್ ಇದರ ಪ್ರಥಮ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅ.೩೦ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಮಿತ್ತಬಾಗಿಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕೆ., ಬೆಳ್ತಂಗಡಿ ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಬೆಳ್ತಂಗಡಿ ಖಿಲ್‌ರ್ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎ. ನಝೀರ್, ಯುವ ಉದ್ಯಮಿ ಸಲೀಂ ಗುರುವಾಯನಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಮಹಮ್ಮದ್ ನಿಸಾರ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ಸಾಧಕರಾದ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ರಾಷ್ಟ್ರ ಪ್ರಶಸ್ತಿ ವಿಜೇತ ಬಿ.ಕೆ. ದೇವರಾವ್ ಮಿತ್ತಬಾಗಿಲು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಭಟ್ ಚೊಕ್ಕಾಡಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಸುವರ್ಣ ಶಿರ್ಲಾಲು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಲ್ಲೇಶಪ್ಪ ಕೆ.ಬಿ. ಇವರುಗಳನ್ನು ಸನ್ಮಾನಿಸಲಾಯಿತು.

Related posts

ಲಾಯಿಲ: ಕನ್ನಾಜೆ ನಿವಾಸಿ ರಾಜು ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಮತ ಬೇಟೆ

Suddi Udaya

ಉಜಿರೆ: ಎಸ್‌ಡಿಎಂ ಐಟಿ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ. ಜೀವಂದರ್ ರವರಿಗೆ ಪಿ.ಹೆಚ್.ಡಿ ಪದವಿ

Suddi Udaya

ಭವಿಷ್ಯದ ಚಿತ್ರರಂಗದ ಭರವಸೆಯ ಕಲಾವಿದ ರಾಜ್ ಚರಣ್ ಬ್ರಹ್ಮಾವರ್

Suddi Udaya

ರೆಖ್ಯ: ಅಕ್ರಮವಾಗಿ ಲಾರಿಯಲ್ಲಿ ಅಕೇಷಿಯ ಮತ್ತು ಮ್ಯಾಜಿಯಂ ಮಿಶ್ರಿತ ಬಿಲ್ಲೆಟ್ಸ್ ಸಾಗಾಟ:

Suddi Udaya

ಬೆಳ್ತಂಗಡಿ ಜ್ಞಾನವಿಕಾಸ ಸಂಯೋಜಕರ ಕ್ರಿಯಾಯೋಜನೆ ಸಭೆ

Suddi Udaya
error: Content is protected !!