ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿಯ ಸಮಾರೋಪ

Suddi Udaya

ಉಜಿರೆ: ಕಲಿಕೆ ಎಂಬುದು ನಿರಂತರವಾಗಿರಬೇಕು ಈ ನಿರಂತರ ಕಲಿಕೆ ನಿಮ್ಮ ಉದ್ಯಮದ ಏಳಿಗೆಗೆ ಸಹಕಾರಿಯಾಗುತ್ತದೆ. ಶೃದ್ಧೆ ಕೂಡ ಬಹಳ ಮುಖ್ಯ, ಶೃದ್ಧೆಯಿಂದ ಕಲಿತಾಗ ಎನನ್ನು ಬೇಕಾದರೂ ಸಾಧಿಸಬಹುದು, ಯುವಕರಾದ ನೀವುಗಳು ಜೀವನದಲ್ಲಿ ಒಂದು ದಾರಿಯನ್ನು ಹುಡುಕಲು ರುಡ್‌ಸೆಟ್ ಸಂಸ್ಥೆಗೆ ಬಂದಿರುತ್ತೀರಿ, ತರಬೇತಿಯನ್ನು ಪಡೆದ ನೀವುಗಳು ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಜೀವನದಲ್ಲಿ ಯಶಸ್ಸನ್ನುಗಳಿಸಿ, ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು, ಇತಿ ಮಿತಿಯೊಳಗೆ ಬದುಕಲು ಕಲಿಯಿರಿ, ದುರಬ್ಯಾಸಗಳಿಂದ ದೂರ ಇರಬೇಕು ಎಂದು ಎಸ್‌ಡಿಎಮ್ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್‌ರವರು ಅಭಿಪ್ರಾಯ ಪಟ್ಟರು.

ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿ ಕಾರ್ಯಕ್ರಮ ನಿರ್ವಹಿಸಿದರೆ, ಕಛೇರಿ ಸಹಾಯಕರಾದ ಪ್ರವೀಣ್‌ರವರು ಧನ್ಯವಾದವಿತ್ತರು. ವೇದಿಕೆಯಲ್ಲಿ ಅತಿಥಿ ಉಪನ್ಯಾಸಕರಾದ ಅನಂತರಾಮ್ ಇವರು ಉಪಸ್ಥಿತರಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Leave a Comment

error: Content is protected !!