ಬೆಳ್ತಂಗಡಿ : ಭೂಮಿ ಬಾನೊದ ಸೊರೊ ತುಳು ಜನಪದ ವಿಡಿಯೋ ಹಾಡು ಹಾಗೂ “ವಿಸ್ಮೃತಿ – ಐತಿಹಾಸಿಕ ಸ್ಮಾರಕಗಳ ಮನನ ಕನ್ನಡ ಅಲ್ಬಂ ಹಾಡು ಲೋಕಾರ್ಪಣೆ ಕಾರ್ಯಕ್ರಮವು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ನ.03 ರಂದು ನಡೆಯಿತು.

ಉದ್ಘಾಟನೆಯನ್ನು ಸಾಹಿತಿ/ನಟ, ಮಂಗಳೂರು ಖ್ಯಾತ ವಕೀಲರು ಶಶಿರಾಜ್ ರಾವ್ ಕಾವೂರು ನೆರವೇರಿಸಿ ಉದ್ಘಾಟನಾ ಭಾಷಣವನ್ನು ಮಾಡಿದರು.
ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕ ಆನಂದ ವಹಿಸಿದರು.
ಮುಖ್ಯ ಅತಿಥಿಗಳಾಗಿ ಮೈಮ್ ರಾಂ ದಾಸ್, ಚಲನಚಿತ್ರ ನಟ/ಜಾನಪದ ಕಲಾವಿದರು, ಬಿ.ಕೆ.ಧನಂಜಯ ರಾವ್ ಅಧ್ಯಕ್ಷರು, ಸುವರ್ಣಮಹೋತ್ಸವ ಸಮಿತಿ ಹಾಗೂ ಜಯಾನಂದ ಗೌಡ ಉಪಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ, ಶೀನಾ ನಾಡೋಳಿ ರಂಗಕಲಾವಿದ/ಗಾಯಕ/ಉಪನ್ಯಾಸಕರು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದರೆ ಮೈ ರಾಂ ದಾಸ್ ರವರು ‘ವಾ ಪೊರ್ಲುಯಾ ಹಾಡನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳನ್ನು ಮನೋರಂಜಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶೀನಾ ನಾಡೋಳಿ ಸ್ವಾಗತಿಸಿದರು.