38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬಳಂಜ: ನಾಲ್ಕೂರು ಬೊಳ್ಳಾಜೆ, ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಹೆಜ್ಜೆಗುರುತು: ಅರಣ್ಯ ಇಲಾಖೆಗೆ ಮಾಹಿತಿ, ಚಿರತೆಯ ಸೆರೆಗೆ ಬೋನ್ ಅಳವಡಿಕೆ

ಬಳಂಜ: ಕಳೆದ ಕೆಲ ಸಮಯಗಳಿಂದ ನಾಲ್ಕೂರು ಗ್ರಾಮದ ಬೊಳ್ಳಾಜೆ,ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆಯ ಹೆಜ್ಜೆಗುರುತು ಕಾಣಸಿಕ್ಕಿದ್ದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಚಿರತೆಯ ಸೆರೆಗಾಗಿ ಬೋನ್ ಅಳವಡಿಸಲಾಗಿದೆ.

ಕೆಲವು ಸಮಯದಿಂದ ಬಳಂಜದಲ್ಲಿ ಚಿರತೆ ಕಾಣ ಸಿಕ್ಕಿದ್ದು ಚಿರತೆಯ ಸೆರೆಗಾಗಿ ಹಲವಾರು ಬಾರಿ ಬೋನ್ ಅಳವಡಿಸಲಾಗಿತ್ತು. ಆದರೆ ಬೋನ್ ಗೆ ಚಿರತೆ ಬೀಳಲಿಲ್ಲ.ಇತ್ತಿಚೆಗೆ ನಾಲ್ಕೂರು ಗ್ರಾಮದ ಬೊಳ್ಳಾಜೆ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಓಡಾಟ ಮಾಡಿದ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.

ಅದಕ್ಕನುಗುಣವಾಗಿ ತಿಂಗಳ ಹಿಂದೆ ಈ ಭಾಗದಲ್ಲಿ ಹಲವಾರು ನಾಯಿಗಳು ಕಾಣೆಯಾಗಿದ್ದವು, ಈ ಬಗ್ಗೆ ಅಳದಂಗಡಿ ಉಪ ವಲಯಾರಣ್ಯಧಿಕಾರಿ ಸುರೇಶ್ ಗೌಡರವರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಪಂದಿಸಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದಾರೆ.

Related posts

ತಣ್ಣೀರುಪಂತ ಗ್ರಂಥಾಲಯ ಸಲಹಾ ಸಮಿತಿ ಸಭೆ

Suddi Udaya

ಶಿಶಿಲ: ಸುಕನ್ಯಾ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಜು. 24 ರಿಂದ ಮುಳಿಯ ಮಾನ್ಸೂನ್ ಧಮಾಕ: ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರಿಗೆ ಆಕರ್ಷಕ ರಿಯಾಯಿತಿ: ಆ. 5 ಮುಳಿಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ,ಗ್ರಾಹಕರ ಸಮಾಗಮ,

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಚಂದ್ರಶೇಖರ ಎಲ್. ಮತ್ತು ಮನೆಯವರಿಂದ ಸ್ಟೀಲ್ ತಟ್ಟೆ ಕೊಡುಗೆ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆ. 10 ರವರೆಗೆ ಇ-ಖಾತಾ ಅಭಿಯಾನದ ವಿಸ್ತರಣೆ

Suddi Udaya
error: Content is protected !!