23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಉತ್ತರ ಕನ್ನಡದಲ್ಲಿ ನಡೆಯುವ ಗಂಗಾಷ್ಟಮಿ ಉತ್ಸವಕ್ಕೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಗೆ ಆಹ್ವಾನ

ಬೆಳ್ತಂಗಡಿ: ರಾಷ್ಟ್ರ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಸರನ್ನು ಪಡೆದಿರುವ ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಶ್ರೀ ಗಂಗಾಂಬಿಕ ದೇವಸ್ಥಾನದಲ್ಲಿ ನ. 6 ರಂದು ನಡೆಯುವ 20 ನೇ ವರ್ಷದ ಗಂಗಾಷ್ಟಮಿ ಉತ್ಸವದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಕುಣಿತ ಭಜನೆಯನ್ನು ನೀಡಲು ಅಲ್ಲಿನ ಆಡಳಿತ ಮಂಡಳಿಯವರು ಆಹ್ವಾನವನ್ನು ನೀಡಿದ್ದಾರೆ.

ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಸಂಚಾಲಕರಾದ ಹರೀಶ್ ವೈ ಚಂದ್ರಮರವರು ನಮ್ಮ ಮಂಡಳಿಯ ಎಲ್ಲಾ ಸದಸ್ಯರ ಉತ್ತಮ ಪಾಲ್ಗೊಳ್ಳುವಿಕೆಯಿಂದ ಎಲ್ಲಾ ಕಡೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಆಮಂತ್ರಿಸುತ್ತಿದ್ದು ದೂರದ ಉತ್ತರ ಕನ್ನಡ ಜಿಲ್ಲೆಯವರು ನಮ್ಮ ಮಂಡಳಿಯನ್ನು ಗುರುತಿಸಿ ಅಲ್ಲಿನ ಹೆಸರಾಂತ ದೇವಸ್ಥಾನದಲ್ಲಿ ನಡೆಯುವ ಉತ್ಸವಕ್ಕೆ ಆಹ್ವಾನಿಸಿರುವುದು ತುಂಬಾ ಖುಷಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಸುಲ್ಕೇರಿ ಗ್ರಾ.ಪಂ. ವತಿಯಿಂದ ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ

Suddi Udaya

ಅನಾರು ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಾರ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟ : ಬೆಸ್ಟ್ ಅನ್‌ರೇಟೆಡ್ ವಿಭಾಗದಲ್ಲಿ ಕೊಕ್ಕಡದ ಸಮರ್ಥ್ ಭಟ್ ತೃತೀಯ

Suddi Udaya

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya
error: Content is protected !!