April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸುಲ್ಕೇರಿಮೊಗ್ರುವಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರುಜಯಂತಿ ಆಚರಣೆ: ಮಹಿಳಾ ಬಿಲ್ಲವ ವೇದಿಕೆ ಉದ್ಘಾಟನೆ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

ಸುಲ್ಕೇರಿಮೊಗ್ರು:ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು ಇದರ ಆಶ್ರಯದಲ್ಲಿ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು ಇವರ ಜಂಟಿ ಆಶ್ರಯದಲ್ಲಿ ನಿರಂಜನ ಶಾಂತಿ ಇವರ ಪೌರೋಹಿತ್ಯದಲ್ಲಿ ಗುರು ಪೂಜೆ, ಹಾಗೂ ದೀಕ್ಷಾ ಗ್ರಂಥಿಧಾರಣೆ ಕಾರ್ಯಕ್ರಮವು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನ.5 ರಂದು ನೆರವೇರಿತು.

ಮಹಿಳಾ ಬಿಲ್ಲವ ವೇದಿಕೆ ಉದ್ಘಾಟನಾ ಸಮಾರಂಭ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ. ಗಂಗಾಧರ್ ಮಿತ್ತಮಾರು ನೇರವೇರಿಸಿ ಶುಭಕೋರಿದರು.

ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಸುಲ್ಕೇರಿಮೊಗ್ರು ಇದರ ಅಧ್ಯಕ್ಷ ಸಂಕೇತ್ ಬಂಗೇರ ವಹಿಸಿದ್ದರು.

ವೇದಿಕೆಯಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ,ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೇಶ್ ಕೋಟ್ಯಾನ್,ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶ್ರೀಮತಿ ಶಾಂಭವಿ ಬಂಗೇರ.ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಪ್ರಮುಖರಾದ ಸತೀಶ್ ಪೂಜಾರಿ, ಮುಂಬಾಯಿ, ನವೀನ್ ಸಾಲಿಯಾನ್ ಪಾಲ್ದಿಮನೆ, ಶ್ರೀಮತಿ ಗೀತಾ. ಎಚ್. ಅಮ್ಮಾಜಿ ಹೊಕ್ಕಳ, ಗುರುವಪ್ಪ ಪೂಜಾರಿ ಪಟ್ಲ ಕೆ. ಸಂಜೀವ ಪೂಜಾರಿ ಕೊಡಂಗೆ, ಕೊರಗಪ್ಪ ಪೂಜಾರಿ ದಾಯಿಗುಡ್ಡೆ, ವಿಶ್ವನಾಥ ಪೂಜಾರಿ ಕುದ್ಯಾಡಿ, ನವೀನ್ ಕುಮಾರ್ ಪಾದೆಮಾರಡ್ಡ, ಕೊರಗಪ್ಪ ಪೂಜಾರಿ,ಪ್ರವೀಣ್ ಕೋಟ್ಯಾನ್ ಪಾಲಣೆ, ಸಂತೋಷ್ ಕೋಟ್ಯಾನ್ ಬಳಂಜ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಧನುಷ್. ಕಾಡಂಗೆ ಮಾಡಿ, ವಿಜಯ್ ಕುಮಾರ್ ಸ್ವಾಗತಿಸಿ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿ, ನಂದನ್ ಕುಮಾರ್ ಧನ್ಯವಾದವಿತ್ತರು.

Related posts

ಕುತ್ಲೂರು ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ರಾಜಶ್ರೀ, ಉಪಾಧ್ಯಕ್ಷರಾಗಿ ಸುಕುಮಾರ ಶೆಟ್ಟಿ ಆಯ್ಕೆ

Suddi Udaya

ಶ್ರೀ ಪಿಲಿಚಾಮುಂಡಿ ದೈವಸ್ಥಾನ ಮಾಸ್ತಿ ಕಲ್ಲು ಮಜಲು ಗ್ರಾಮಸ್ಥರಿಂದ ಕಡಿರ ನಾಗನಕಟ್ಟೆ ನಿರ್ಮಿಸಿದ ಶಿಲ್ಪಿಗೆ ದೇಣಿಗೆ ಹಸ್ತಾಂತರ

Suddi Udaya

ನಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಆಚರಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ

Suddi Udaya

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತದಾನ

Suddi Udaya
error: Content is protected !!