ಇಳಂತಿಲ: ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಉಪ್ಪಿನಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು,ಇಲ್ಲಿನ ಸಮಾಜ ಕಾರ್ಯ ವಿಭಾಗ ಮತ್ತು ಗ್ರಾಮ ಪಂಚಾಯತ್ ಇಳಂತಿಲ ಇವರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಯೋಗದೊಂದಿಗೆ, ನ. 5 ರಂದು ಇಳಂತಿಲ ವಾಣಿಶ್ರೀ ಭಜನಾ ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ರಕ್ತದಾನ ಮಾಡುವ ಮೂಲಕ ಚಾಲನೆಯನ್ನು ನೀಡಲಾಯಿತು.
ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ಮೆಡಿಕಲ್ ಆಫೀಸರ್ ಡಾ. ರಾಮಚಂದ್ರ ಭಟ್ಟ್ ಮಾತನಾಡಿ ಕಳೆದ 25 ವರ್ಷಗಳಿಂದ ನಮ್ಮ ಈ ಸಂಸ್ಥೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಸಾವಿರಾರು ಜೀವಗಳ ಉಳಿವಿಗೆ ಕಾರಣವಾಗಿದೆ ಎಂದರು.
ಜೆ.ಸಿ.ಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶೇಖರ್ ಗೌಂಡತ್ತಿಗೆ ಮಾತನಾಡಿ ಸಮಾಜ ಕಾರ್ಯ ವಿಭಾಗದ ವಿಧ್ಯಾರ್ಥಿಗಳು ಹಮ್ಮಿಕೊಂಡ ಈ ರಕ್ತದಾನ ಶಿಬಿರ ಕಾರ್ಯಕ್ರಮವು ಶಿಕ್ಷಣದ ಜೊತೆಗೆ ಅವರು ಸಮಾಜ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿ ಎಂದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು,ಇಲ್ಲಿನ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥರು ಡಾ.ನಂದೀಶ್ ವೈ.ಡಿ ಮಾತನಾಡಿ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದರು.
ವೇದಿಕೆಯಲ್ಲಿ ವಾಣಿಶ್ರೀ ಭಜನಾ ಮಂದಿರ ವಾಣೀನಗರ ಇಳಂತಿಲ ಅಧ್ಯಕ್ಷರು ಹರೀಶ್ ಗೌಡ ಪೊಟ್ಟುಕೆರೆ, ಗ್ರಾಮ ಪಂಚಾಯತ್ ಇಳಂತಿಲದ ಉಪಾಧ್ಯಕ್ಷರು ಸವಿತಾ ಹೆಚ್, ಬಿ.ಎಮ್,ಎಸ್ ಆಟೋ ರಿಕ್ಷಾ ಚಾಲಕ ಮತ್ತು ಮಾಲಕರು ಇಳಂತಿಲದ ಅಧ್ಯಕ್ಷರು ರಾಜೇಶ್ ಕೋಟ್ಯಾನ್, ವಾಣಿಶ್ರೀ ಗೆಳೆಯರ ಬಳಗ ವಾಣೀನಗರ 94-95 ಇಳಂತಿಲ(ರಿ) ಅಧ್ಯಕ್ಷರು ಪ್ರೀತಂ ಎಂ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿನ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥರು ಡಾ.ನಂದೀಶ್ ವೈ.ಡಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಇಳಂತಿಲದ ಅಧ್ಯಕ್ಷರು ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದರು.
ಗ್ರಾಮ ಪಂಚಾಯತ್ ಇಳಂತಿಲದ ಸದಸ್ಯರು ಮತ್ತು ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆ ಪ್ರೇಮಾ,ಮತ್ತು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿನ ಸಮಾಜ ಕಾರ್ಯ ವಿಭಾಗದ ವಿಧ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಕೆ. ಅಕ್ಷಯ್, ದೀಕ್ಷಿತಾ ಎಂ, ಕೀರ್ತಿಕಾ, ವೈಶಾಲಿ ಇವರು ಈ ರಕ್ತದಾನ ಶಿಬಿರ ಎಂಬ ಕಾರ್ಯಕ್ರಮವನ್ನು ಸಂಯೋಜಿಸಿದರು.
ವಿದ್ಯಾರ್ಥಿಗಳಾದ ಕೀರ್ತಿಕಾ ಮತ್ತು ವೈಶಾಲಿ ಪ್ರಾರ್ಥಿಸಿದರು, ಕೀರ್ತಿಕಾ ಸ್ವಾಗತಿದರು, ವೈಶಾಲಿ ವಂದಿಸಿದರು. ದೀಕ್ಷಿತಾ ಎಂ. ನಿರೂಪಿಸಿದರು.