28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಯಾತ್ರೆ ಕೈಗೊಂಡ ರಾಜಾಜಿನಗರದ ಶಾಸಕ ಸುರೇಶ ಕುಮಾರ್

ಬೆಳ್ತಂಗಡಿ: ಬೆಂಗಳೂರಿನಿಂದ ಶ್ರೀ  ಕ್ಷೇತ್ರ ಧರ್ಮಸ್ಥಳಕ್ಕೆ  ಮಾಜಿ ಸಚಿವ ಹಾಗು ರಾಜಾಜಿನಗರದ ಶಾಸಕ ಸುರೇಶ ಕುಮಾರ್ ಅವರು  ಸೈಕಲ್ ಯಾತ್ರೆ ಕೈಗೊಂಡು  ಧರ್ಮಸ್ಥಳದಲ್ಲಿ  ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.  ಬುಧವಾರ (ನ. 8)ಮುಂಜಾನೆ ಬೆಂಗಳೂರಿನಿಂದ ಹೊರಟ ಅವರು ನ.1೦ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ತನ್ನ ಸೈಕಲ್ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದಾರೆ. 

ದಿ ರಾಜಾಜಿನಗರ ಪೆಡಲ್ ಪವರ್ ತಂಡದ ಮೂಲಕ ಎಂಟು ಜನ ಸಹಸವಾರರ ಜತೆಗೆ ಮೂರು ದಿನಗಳ  ಸೈಕಲ್ ಯಾತ್ರೆಯನ್ನು  ಯಶಸ್ವಿಯಾಗಿ ಪೂರೈಸಿದ ಶಾಸಕ ಸುರೇಶ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ಶ್ರೀ ಸ್ವಾಮಿಯ ಸೇವೆ ಗೈದಿದ್ದಾರೆ. ಸುರೇಶ ಕುಮಾರ್ ಜತೆಗೆ ಅಯ್ಯಪ್ಪ, ಸಾಗರ್ ನಾಯ್ಡು, ಹರೀಶ್, ರಾಘವ್,ದಿವಾಕರ್, ಮೋಹನ್, ಬಾಲು  ಮತ್ತು ಕಿರಣ್ ಸಹಸವಾರರಾಗಿ ಪಾಲ್ಗೊಂಡಿದ್ದರು. 2014ರ ನವೆಂಬರ್ ನಲ್ಲಿ  ಶಾಸಕ ಸುರೇಶ್ ಕುಮಾರ್ ಎಂಟು ದಿನಗಳ  ಕಾಲ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯುತ್ರೆ  ಮೂಲಕ  ಸಾಗಿ ಬಂದಿದ್ದರು.

Related posts

ಗುರಿಪಳ್ಳ ಶಾಲೆಯಲ್ಲಿ ಪೋಷಕರಿಗೆ ವಿಶೇಷ ಮಾಹಿತಿ ಶಿಬಿರ

Suddi Udaya

ಕುವೆಟ್ಟು ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಧರ್ಮಸ್ಥಳ : ಶ್ರೀ ಧ.  ಮಂ.  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಾಯಕತ್ವ ತರಬೇತಿ ಕಾರ್ಯಾಗಾರ

Suddi Udaya

ಕ್ಯಾಂಟಿನ್‌ನಲ್ಲಿ ಅಕ್ರಮ ವೇಶ್ಯಾವಟಿಕೆ ಪ್ರಕರಣ ಆರೋಪಿ ಉಸ್ಮಾನ್ ಗೆ ಜಾಮೀನು ಮಂಜೂರು

Suddi Udaya

ಬೆಳ್ತಂಗಡಿಯಲ್ಲಿ ಅಕ್ರಮವಾಗಿ ಗೋ ಸಾಗಾಟ

Suddi Udaya

ಬೆಳ್ತಂಗಡಿ ಜೆಸಿಐ ವತಿಯಿಂದ ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಕುಮಾರ್ ಜೈನ್ ರಿಗೆ ಅಭಿನಂದನೆ

Suddi Udaya
error: Content is protected !!