April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಿತ್ರೀಕರಣ ಪೂರ್ಣಗೊಳಿಸಿದ ಕೃಷ್ಣ ಬೆಳ್ತಂಗಡಿ ನಿರ್ದೇಶನದ “ಇದು ನಮ್ ಶಾಲೆ”

ಬೆಳ್ತಂಗಡಿ: ಶ್ರೀ ಜೇನುಕಲ್ ಪ್ರೊಡಕ್ಷನ್ ಇವರ ಮೊದಲ ಕಾಣಿಕೆ, “ಇದು ನಮ್ ಶಾಲೆ” ಮಕ್ಕಳ ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಅರಸೀಕೆರೆ ಜೇನುಕಲ್ ಹಾಗೂ ಗೀಜಿಹಳ್ಳಿ ವ್ಯಾಪ್ತಿಯಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದು ಪೂರ್ಣಗೊಂಡಿದೆ.


“ಕೃಷ್ಣ ಬೆಳ್ತಂಗಡಿ” ಕಥೆ ಚಿತ್ರಕತೆ ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇದು ಇವರ ಮೂರನೇ ನಿರ್ದೇಶನದ ಸಿನಿಮಾವಾಗಿದೆ.
ರವಿ ಆಚಾರ್ ಹಾಗೂ ಅರಸೀಕೆರೆ ಉಮೇಶ್ ನಿರ್ಮಾಣ ಮಾಡಿದ್ದಾರೆ. ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಅನ್ನುವ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ.


ಉಳಿದಂತೆ, ಶಂಕರ್ ಭಟ್, ಪೂಜಾ, ಈಶ್ವರ್ ದಲ, ವಾಣಿ ಗೌಡ, ರಾಜು ನಾಯಕ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅರಸೀಕೆರೆ ಶಾಸಕರಾದ ಶಿವಲಿಂಗೇ ಗೌಡರು ಒಂದು ಪ್ರಧಾನ ಪಾತ್ರ ಮಾಡಿದ್ದಾರೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದ್ದಾರೆ.

Related posts

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಪೆರಿಂಜೆ ಗ್ರಾಮ ಸಮೀಕ್ಷೆ

Suddi Udaya

ಇಳಂತಿಲದಲ್ಲಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya

ಕುವೆಟ್ಟು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಸರಕಾರ ನೀಡಿದ ಉಚಿತ ಪಾದರಕ್ಷೆ ವಿತರಣಾ ಸಮಾರಂಭ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ: ನೃತ್ಯ ಸ್ಪರ್ಧೆಯಲ್ಲಿ ಬೀಟ್ ರಾಕರ್ಸ್ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಬೆಂಗಳೂರಿನ ಪ್ರಸಿದ್ದ ಕೈಗಾರಿಕೋದ್ಯಮಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ಅಂತರರಾಷ್ಟ್ರೀಯ ಆರ್ಯಭಟ- 2024 ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!