23.4 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸವಣಾಲು: ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ

ಸವಣಾಲು : ಇಲ್ಲಿಯ ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ನಡೆಯುವ ಮಕ್ಕಳ ಕುಣಿತ ಭಜನಾ ತರಬೇತಿಯನ್ನು ನ.12ರಂದು ರಾಧಾಕೃಷ್ಣ ಸಭಾಭವನದಲ್ಲಿ ಪ್ರಾರಂಭಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಉದ್ಘಾಟಿಸಿದರು. ಭಜನಾ ತರಬೇತಿದಾರರಾದ ಸಂದೇಶ ಮದ್ದಡ್ಕ ಭಾಗವಹಿಸಿ ಕುಣಿತ ಭಜನೆಯ ಮಹತ್ವವನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು. ಕುಣಿತ ಭಜನಾ ತರಬೇತಿಯ ಜವಾಬ್ದಾರಿಯನ್ನು ವಹಿಸಿದ ಫ ಲ್ಗುಣಿ ಮಹಿಳಾ ಮಂಡಲದ ಗ್ರಾ.ಪಂ. ಸದಸ್ಯೆ ಶ್ರೀಮತಿ ಜಯಲಕ್ಷ್ಮಿ ಅನಿಸಿಕೆ ವ್ಯಕ್ತಪಡಿಸಿ ಎಲ್ಲರ ಸಹಕಾರ ಕೋರಿದರು.

ಸಮಾರಂಭದಲ್ಲಿ ಭಜನಾ ಮಂಡಳಿ ಉಪಾಧ್ಯಕ್ಷ ಪ್ರಭಾಕರ ಭಟ್ ಜಿ, ದಯಾನಂದ ಗೌಡ, ಪ್ರಕಾಶ್ , ಯೋಗೀಶ್ ಪಂಚಾಯಿತಿ ಸದಸ್ಯರಾದ ಶ್ರೀಮತಿ ಸುಮಲತಾ ಚಂದ್ರಶೇಖರ್ ಹಾಗೂ ಇದಕ್ಕೆ ಸಹಕರಿಸಿದ ಯೋಗೀಶ್ ಪುರಂದರ ಪೂಜಾರಿ ಸಂತೋಷ್ ಗೌಡ ಮತ್ತು ಫಲ್ಗುಣಿ ಮಹಿಳಾ ಮಂಡಲದ ಶ್ರೀಮತಿ ವೀಣಾ ಗಣೇಶ್ ಭಂಡಾರಿ, ಭಾರತಿ ಸತೀಶ್ ಶೆಟ್ಟಿ, ಸುಮಲತಾ ಜಯ ಶೆಟ್ಟಿ ಭಾಗವಹಿಸಿದರು. ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಗಣೇಶ್ ಭಂಡಾರಿ ಸ್ವಾಗತಿಸಿ ನಿರೂಪಿಸಿದರು.

Related posts

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya

ಬೆಳ್ತಂಗಡಿ: ಪಂಚಾಯತ್‌ರಾಜ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸಂಜೀವ ನಾಯ್ಕರಿಗೆ ಬೀಳ್ಕೊಡುಗೆ

Suddi Udaya

ಬಳಂಜ: ಪಾದಚಾರಿ ಮಹಿಳೆರೊರ್ವರಿಗೆ ದ್ವಿಚಕ್ರ ವಾಹನ ಡಿಕ್ಕಿ,ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Suddi Udaya

ಕಡಿದು ಬಿದ್ದ ವಿದ್ಯುತ್ ತಂತಿ, ಬೈಕ್ ಸವಾರರು ಪಾರು

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಗರ್ಡಾಡಿ : ಪ್ರಗತಿಪರ ಕೃಷಿಕ ಹಾಗೂ ಖ್ಯಾತ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ ನಿಧನ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ