April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ವಾರ್ಷಿಕ ಸಾಂಸ್ಕೃತಿಕ ದಿನಾಚರಣೆ

ಬೆಳ್ತಂಗಡಿ: ಸಾಂಸ್ಕೃತಿಕವಾದ ಅಭಿರುಚಿಗಳನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುವುದು ಎಂದು ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ ಕೆ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಗಳಿಸುವುದನ್ನು ಮಾತ್ರ ಉದ್ದೇಶವಾಗಿಟ್ಟುಕೊಳ್ಳದೆ ತಮ್ಮಲ್ಲಿರುವ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ನೆಮ್ಮದಿಯನ್ನು ಪಡೆಯಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಉಪಸ್ಥಿತರಿದ್ದರು. ಕಾಲೇಜಿನ ಸಾಂಸ್ಕೃತಿಕ ಸಂಯೋಜಕರುಗಳಾದ ಮಹಾಬಲ ಗೌಡ ಸ್ವಾಗತಿಸಿದರು. ಶ್ರೀಮತಿ ದೀಕ್ಷಾ ಹೊಂದಿಸಿದರು ಉಪನ್ಯಾಸಕ ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಶಿರ್ಲಾಲು: ಜಿನ್ನಪ್ಪ ಪೂಜಾರಿ ಅಸೌಖ್ಯದಿಂದ ನಿಧನ

Suddi Udaya

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

Suddi Udaya

ರಾಜ್ಯಾದಾದ್ಯಂತ ಬಾಂಬೆ ಮಿಠಾಯಿ ನಿಷೇಧ: ಆರೋಗ್ಯ ಸಚಿವರಿಂದ ಅಧಿಕೃತ ಆದೇಶ – ಇನ್ಮುಂದೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ

Suddi Udaya

ಪೆರಾಜೆ ಕಿಂಡಿ ಅಣೆಕಟ್ಟುವಿನಲ್ಲಿ ಶೇಖರಣೆಗೊಂಡ ಮರದ ದಿಮ್ಮಿಗಳು ಬಳಂಜ ಗ್ರಾಮ ಪಂಚಾಯತ್ ನಿಂದ ತೆರವು ಕಾರ್ಯ

Suddi Udaya
error: Content is protected !!