ಬೆಳ್ತಂಗಡಿ : ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಮಾಂಸ ಸಮೇತ ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ನ.13 ರಂದು ಸಂಜೆ ನಡೆದಿತ್ತು. ಇದೀಗ ಕಡವೇ ಬೇಟೆಯಾಡಿದ ಇಬ್ಬರು ಆರೋಪಿಗಳ ಮೇಲೆ ನ.17 ರಂದು ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಘಟನೆ ವಿವರ: ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿಯ ಗಿರೀಶ್ ಎಮ್.ಆರ್ ಎಂಬವರ ಮನೆಯಲ್ಲಿ ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ನೇತೃತ್ವದ ತಂಡ ನ.13 ರಂದು ಸಂಜೆ 5 ಗಂಟೆ ಸುಮಾರಿಗೆ ದಾಳಿ ಮಾಡಿದ್ದು ಈ ವೇಳೆ ಆರೋಪಿ ಗಿರೀಶ್.ಎಮ್.ಆರ್ ಮತ್ತು ಆರೋಪಿ ಬಿಜು ಎಂಬಾತ ಮಾಂಸ ಸಮೇತ ಹಿಡಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಮನೆ ಹಿಂಭಾಗದಲ್ಲಿ ಮಾಂಸ ಮಾಡಲು ಉಪಯೋಗಿಸಿದ್ದ ರಕ್ತಸಿಕ್ಕ ಒಂದು ಬುಟ್ಟಿ , ಗೋಣಿ ಚೀಲಗಳನ್ನು ಮಹಜರು ನಡೆಸಿದ ಬಳಿಕ ವಶಕ್ಕೆ ಪಡೆದುಕೊಂಡಿದ್ದರು. ಅರಣ್ಯ ಇಲಾಖೆಯ ತನಿಖೆ ಬಳಿಕ ನ.17 ರಂದು ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2016 ರಲ್ಲಿ ಕಡವೆ ಕಾಡುಪ್ರಾಣಿ ಬೇಟೆಯಾಡಿ ಅರಣ್ಯ ಇಲಾಖೆ ಕೈಗೆ ಸಿಕ್ಕಿಬಿದ್ದು ಬಂದೂಕು ಅರಣ್ಯ ಇಲಾಖೆಯ ವಶದಲ್ಲಿದ್ದು. ಕೋರ್ಟ್ ನಲ್ಲಿ ತನಿಖೆಯಲ್ಲಿದೆ. ಇದೀಗ ಮತ್ತೆ ಎರಡನೇ ಪ್ರಕರಣ ದಾಖಲಾಗಿದೆ. ಇನ್ನೂ ಘಟನಾ ಸ್ಥಳದಲ್ಲಿ ರಕ್ತಸಿಕ್ಕವಾಗಿ ಪತ್ತೆಯಾಗಿದ್ದ ಬುಟ್ಟಿ ಹಾಗೂ ಗೋಣಿಚೀಲಗಳನ್ನು ಕಡವೆ ಕಾಡುಪ್ರಾಣಿಯಾದ್ದು ಎಂಬ ಖಚಿತ ಪಡಿಸಲು ಪರೀಕ್ಷೆಗಾಗಿ ಹೈದರಾಬಾದ್ ಗೆ ಕಳುಹಿಸಿಕೊಡಲಿದ್ದಾರೆ ಬೆಳ್ತಂಗಡಿ ಅರಣ್ಯಾಧಿಕಾರಿಗಳು ಎಂದು ಮಾಹಿತಿ ತಿಳಿದುಬಂದಿದೆ.