25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ

ಮಿತ್ತಬಾಗಿಲು : ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ ನ.19 ರಂದು ನೆರವೇರಿತು.
ಗಣಪತಿಗುಡಿಯ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಬೆಡಿಗುತ್ತು ಮನೆತನದ ರಾಮಣ್ಣಗೌಡ ಸುಂದರಿ ಮತ್ತು ಮಕ್ಕಳು ವಹಿಸಿದ್ದು ಅವರ ಮನೆತನದ ಬಹುತೇಕ ಕುಟುಂಬಸ್ಥರು ಹಾಜರಿದ್ದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಕೆ ಲೋಕೇಶ್ ರಾವ್, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಪ್ರಧಾನ ಕಾರ್ಯದರ್ಶಿ ದಾಸಪ್ಪಗೌಡ ಕಾಂಜಾನು, ಕಾರ್ಯದರ್ಶಿ ಜ್ಯೋತಿ ಲಕ್ಷ್ಮಿ ಕಿಲ್ಲೂರು, ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ ಸೇನರಬೆಟ್ಟು, ಬಿ.ಎಮ್ ಗೌಡ ಉಜಿರೆ, ರಾಜೇಂದ್ರ ಗೌಡ ಬೆಡಿಗುತ್ತು, ಶಶಿಧರ ಬೆಡಿಗುತ್ತು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ವ್ಯವಸ್ಥಾಪನ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯವರು ಉಪಸ್ಥಿತರಿದ್ದರು.


ಈಗಾಗಲೇ ಬ್ರಹ್ಮ ಕುಂಭಾಭಿಷೇಕದ ಬಹುತೇಕ ಸಮಿತಿಗಳು ರಚನೆಗೊಂಡಿದ್ದು ಮುಂದೆ ಪ್ರತಿ ಆದಿತ್ಯವಾರ
ಇದರ ರೂಪು ರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

Related posts

ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 98.50 ಫಲಿತಾಂಶ

Suddi Udaya

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆ ರವರಿಗೆ ಪಿಎಚ್ ಡಿ ಪದವಿ

Suddi Udaya

ಕೊಕ್ಕಡ ಸ.ಪ. ಪೂ. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕುವೆಟ್ಟು ಗ್ರಾ.ಪಂ. ವತಿಯಿಂದ ಚರಂಡಿ ದುರಸ್ತಿ

Suddi Udaya

ಶ್ರೀ ಧ .ಮಂ. ಪ್ರೌಢ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರ ಕಾರ್ಯಾಗಾರ

Suddi Udaya
error: Content is protected !!