ಕುವೆಟ್ಟು: ನೂರಲ್ ಹುದಾ ಜುಮಾ ಮಸೀದಿ ಮದ್ದಡ್ಕ ಇದರ ವತಿಯಿಂದ ಮಾದಕ ದ್ರವ್ಯ ಮುಕ್ತ ಮದ್ದಡ್ಕ ಜನಜಾಗೃತಿ ಜಾಥಾ ನ.19ರಂದು ಮದ್ದಡ್ಕದಲ್ಲಿ ಜರಗಿತು.
ಜಾಥವನ್ನು ಹಸನ್ ಮುಬಾರಕ್ ಸಖಾಫಿ ಖತೀಬರು ನೂರಲ್ ಹುದಾ ಜಮಾ ಮಸೀದಿ ಮದ್ದಡ್ಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ದಡ್ಕ ಮಸೀದಿಯ ಆಧ್ಯಕ್ಷ ಅಶ್ರಫ್ ಚಿಲಿಂಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಅರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಎ ಯಂ ತಮ್ಮ ಇಲಾಖೆಯು ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂದು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೇರಣಾ ಬಾಷಣಗಾರರು ರಫೀಕ್ ಮಾಸ್ಟರ್ ಮಂಗಳೂರು ಅಗಮಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಬಹಳಷ್ಟು ಸಣ್ಣ ಪ್ರಾಯದ ಯುವಕರು ಇಂತಹ ಮಾದಕ ದ್ರವ್ಯ ದುಷ್ಚಟಗಳಿಗೆ ಬಲಿಯಾಗುತ್ತಿದ್ದು ನಾವೆಲ್ಲರೂ ಇದಕ್ಕೆ ಕಡಿವಾಣ ಹಾಕಬೇಕಿದೆ ಎಲ್ಲರ ಸಹಕಾರ ಇರಲಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಮದ್ದಡ್ಕ ಮಸೀದಿಯ ಗೌರವಾಧ್ಯಕ್ಷ ಎಸ್ ಎ ರಾಝೀಯುದ್ದೀನ್ ಸಬರಬೈಲು, ಪ್ರಧಾನ ಕಾರ್ಯದರ್ಶಿ ಎಮ್ ಸಿರಾಜ್ ಚಿಲಿಂಬಿ, ಕೋಶಾಧಿಕಾರಿ ರಿಯಾಝ್ ಸಬರಬೈಲು, ಉಪಾಧ್ಯಕ್ಷ ಸ್ವಾಲಿಹ್ ಮದ್ದಡ್ಕ, ಅನ್ವರುಲ್ ಹಿದಾಯ ಮದರಸ ಪಾದೆ ಅಧ್ಯಕ್ಷ ಆರೀಸ್ ಶಾಪಿ, ಎಸ್ ವೈ ಎಸ್ ಆಲಂದಿಲ ಘಟಕ ಅಧ್ಯಕ್ಷ ಅಬುಸಾಲಿಹ್ , ಮುರ್ಶಿದುಲ್ ಅನಾಂ ಅರಬಿಕ್ ಸ್ಕೂಲ್ ಆಲಂದಿಲ ಅಧ್ಯಕ್ಷ ರಮ್ಲ ಕೆಲ್ಲಾರ್ , ಕುವೆಟ್ಟು ಗ್ರಾ ಪಂ ಸದಸ್ಯರಾದ ಮುಸ್ತಾಫ ಜಿಕೆ, ರಿಯಾಝ್ ಮದ್ದಡ್ಕ, ಮದ್ದಡ್ಕ ಟಿ ಆರ್ ಯಂ (ರಿ) ಅಧ್ಯಕ್ಷ ಹೈದರ್ ಎಚ್ ಎಸ್ . , ಹೆಲ್ಪ್ ಲೈನ್ ಮದ್ದಡ್ಕ ಅಧ್ಯಕ್ಷ ಶಾಕೀರ್ ಚಿಲಿಂಬಿ, ಹಾಜಿ ಉಸ್ಮಾನ್ ಆಲಂದಿಲ ಬ್ಲಾಕ್ ಅಧ್ಯಕ್ಷರು ಕೆ ಯಂ ಜೆ. ಇಲ್ಯಾಸ್ ಚಿಲಿಂಬಿ ಅಧ್ಯಕ್ಣರು ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಘಟಕ, ಅಶ್ರಫ್ ಅಧ್ಯಕ್ಷರು ಎಸ್ ಎಸ್ ಎಫ್ ಮದ್ದಡ್ಕ ಘಟಕ, ಯಂ ಎಚ್ ಅಬೂಬಕ್ಕರ್ ಅಧ್ಯಕ್ಷರು ಎಸ್ ವೈ ಎಸ್ ಮದ್ದಡ್ಕ ಮತ್ತಿತರರು ಉಪಸ್ಥಿತರಿದ್ದರು ಸಿರಾಜ್ ಚಿಲಿಂಬಿ ಸ್ವಾಗತಿಸಿ, ಸ್ವಾಲಿಹ್ ವಂದಿಸಿದರು.