ಬಳಂಜ: ಅಡಿಕೆ ಇಳುವರಿ ಹಾಗೂ ಕರಾವಳಿಯ ಹುಳಿ ಮಣ್ಣಿನ ಮೇಲೆ ಡೋಲೋಮೈಟ್’ ನ ಪ್ರಭಾವದ ಕುರಿತು ಕ್ಷೇತ್ರ ಪರಿಶೀಲನೆಯ ಕಾರ್ಯಕ್ರಮ

Suddi Udaya

ಬಳಂಜ: ಭಾ. ಕೃ. ಅ. ಪ. ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ವತಿಯಿಂದ ಬಳಂಜ ಗ್ರಾಮದ ಜಗದೀಶ್ ರೈ ಅವರ ತೋಟದಲ್ಲಿ ಅಡಿಕೆ ಇಳುವರಿ ಹಾಗೂ ಕರಾವಳಿಯ ಹುಳಿ ಮಣ್ಣಿನ ಮೇಲೆ ಡೋಲೋಮೈಟ್’ ನ ಪ್ರಭಾವದ ಕುರಿತು ಕ್ಷೇತ್ರ ಪರಿಶೀಲನೆಯ ಕಾರ್ಯಕ್ರಮ ಜರುಗಿತು.

ಹುಳಿ ಮಣ್ಣಿನ ದುಷ್ಪರಿಣಾಮಗಳನ್ನು ತಗ್ಗಿಸಿ ಎಲ್ಲಾ ರೀತಿಯ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸಲು ಮಣ್ಣಿನ ರಸಸಾರದ ಆಧಾರದ ಮೇಲೆ ಡೋಲೋಮೈಟ್ ಬಳಕೆ ಅವಶ್ಯಕ ಎಂದು ಅದರ ಪ್ರಯೋಜನಗಳ ಕುರಿತು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ರೈತರಿಗೆ ತಿಳಿಸಿದರು.

ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಕೇದಾರನಾಥ ಅಡಿಕೆ ಬೆಳೆಯಲ್ಲಿ ಕಂಡು ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆಗಾಗಿ ಬಳಸುವ ಶಿಲೀಂದ್ರನಾಶಕಗಳ ಕುರಿತು ಮಾಹಿತಿ ನೀಡಿದರು.

ನಂತರ ಆಯ್ದ ಹತ್ತು ಜನ ರೈತರಿಗೆ ಅವಶ್ಯಕ ಕೃಷಿ ಪರಿಕರಗಳನ್ನು ನೀಡಿ ಅವರ ತೋಟಗಳಲ್ಲಿ ಕ್ಷೇತ್ರ ಪರಿಶೀಲನೆ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಸುರೇಶ್ ಶೆಟ್ಟಿ, ಜಗದೀಶ್ ರೈ, ರಮೇಶ್ ಪೂಜಾರಿ, ಪ್ರಶಾಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!