ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಡಾ. ಡಿ ವೀರೇಂದ್ರ ಹೆಗ್ಗಡೆಯವರ 76 ನೇ ಜನ್ಮ ದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ನ.25 ರಂದು ಬೆಳಿಗ್ಗೆ ಗಂಟೆ 11.00 ರತ್ನತ್ರಯ ಸಭಾಂಗಣದಲ್ಲಿ ಜರುಗಲಿದೆ.
ಅಧ್ಯಕ್ಷತೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ ಹರ್ಷೇಂದ್ರ ಕುಮಾರ್ ವಹಿಸಲಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ರವರು ಗೌರವ ಉಪಸ್ಥಿತರಿರುವರು.
ಉದಯವಾಣಿ ದಿನಪತ್ರಿಕೆಯ ಉಪಮುಖ್ಯ ವರದಿಗಾರರು ಶ್ರೀ ಲಕ್ಷ್ಮೀ ಮಚ್ಚಿನ ವಿಶೇಷ ಉಪನ್ಯಾಸ ನೀಡಲಿರುವರು.
ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಬೆಳಿಗ್ಗೆ ಗಂಟೆ 8.45 ಕ್ಕೆ ಸ್ವಚ್ಛ ಉಜಿರೆ-ಸ್ವಸ್ಥ ಉಜಿರೆ ಸ್ವಚ್ಛತಾ ಅಭಿಯಾನ ಹಾಗೂ ಬೀದಿನಾಟಕ ಪ್ರದರ್ಶನ ನಡೆಯಲಿದೆ.











