28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರ್ಲ -ಬೈಪಾಡಿ ಅಂಚೆ ಇಲಾಖೆಯ ನೂತನ ಶಾಖೆಯ ಮುಂಭಾಗದಲ್ಲಿ ಆಧಾರ್ ಅದಾಲತ್, ನೋಂದಣಿ, ತಿದ್ದುಪಡಿ, ಹಾಗೂ ಅಂಚೆ ಇಲಾಖೆಯ ಹೊಸ ಖಾತೆ ತೆರೆಯುವ ಕಾರ್ಯಕ್ರಮ

ಪೆರ್ಲ -ಬೈಪಾಡಿ : ಬಂದಾರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಜಂಟಿ ಆಶ್ರಯದಲ್ಲಿ ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಅಂಚೆ ಇಲಾಖೆಯ ನೂತನ ಶಾಖೆಯು ಆರಂಭಗೊಳ್ಳಲಿರುವ ಕಟ್ಟಡದ ಮುಂಭಾಗದಲ್ಲಿ ಆಧಾರ್ ಅದಾಲತ್, ನೋಂದಣಿ ಮತ್ತು ತಿದ್ದುಪಡಿ ಮತ್ತು ಅಂಚೆ ಇಲಾಖೆಯ ಹೊಸ ಖಾತೆ ತೆರೆಯುವ ಕಾರ್ಯಕ್ರಮವನ್ನು ನ.25 ರಂದು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೋಹನ್ ಶೆಟ್ಟಿ ಸಹಾಯಕ ಅಂಚೆ ಅಧೀಕ್ಷಕರು ಕಾರ್ಕಳ, ಧನಂಜಯ ಅಂಚೆ ಮೇಲ್ವಿಚಾರಕರು ಬೆಳ್ತಂಗಡಿ ಉಪ ವಿಭಾಗ, ಶ್ರೀಮತಿ ವಿಮಲಾ ಅಂಚೆ ಮೇಲ್ವಿಚಾರಕರು ಬೆಳ್ತಂಗಡಿ, ಶ್ರೀಮತಿ ಭಾರತಿ ಕೋಡಿಯಲ್ ಗ್ರಾಮ ಪಂಚಾಯತ್ ಸದಸ್ಯರು ಬಂದಾರು, ಗೋಪಾಲಕೃಷ್ಣ ಶರ್ಮ ಕೊಯ್ಯುರು, ಮಹಾಬಲ ಗೌಡ ನಾಗಂದೋಡಿ, ರಾಮಣ್ಣಗೌಡ ಬೈಪಾಡಿ, ಉಮೇಶ್ ಗೌಡ ಅಧ್ಯಕ್ಷರು ಹಾಲು ಉತ್ಪಾದಕಾರ ಸಂಘ ಪೆರ್ಲ -ಬೈಪಾಡಿ, ನಿರ್ದೇಶಕರಾದ ಬಾಲಕೃಷ್ಣ ಗೌಡ ಪಾಪುದಡ್ಕ, ಲಕ್ಷ್ಮಿಕಾಂತಗೌಡ ಕೀಲಾರು, ದಿನೇಶ್ ಗೌಡ ಅಡ್ಡಾರು ಮತ್ತು ಊರವರು ಉಪಸ್ಥಿತರಿದ್ದರು.

Related posts

ವೇಣೂರು ನವಚೇತನ ಆಂ.ಮಾ. ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ, ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಹುಜನ ನೇತಾರ ಪಿ. ಡೀಕಯ್ಯರವರ ಬದುಕು -ಹೋರಾಟಗಳ ಸಂಸ್ಮರಣಾ ಕಾರ್ಯಕ್ರಮ

Suddi Udaya

ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

Suddi Udaya

ಬಂದಾರು : ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಅಳದಂಗಡಿ ಅರಮನೆಗೆ ಶಿಲಾಮಯ ಆನೆಗಳ ಮೆರುಗು: ಪ್ರಸಿದ್ಧ ಬೆಂಗಳೂರು ಉದ್ಯಮಿ ದೇವೇಂದ್ರ ಹೆಗ್ಡೆಯವರಿಂದ ಕೊಡುಗೆ

Suddi Udaya

ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿದ್ದ ಸರಕಾರದ ಸುತ್ತೋಲೆಗೆ ಹೈಕೋರ್ಟ್ ತಡೆಯಾಜ್ಞೆ

Suddi Udaya
error: Content is protected !!