37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೆಜ್ಜೆಗಿರಿ ಮೇಳದ “ಪ್ರಚಂಡ ಮಹಿಷಾಸುರ” ಪ್ರಸಂಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಡುಗಡೆ

ಬೆಳ್ತಂಗಡಿ: ಶ್ರೀ ಗೆಜ್ಜೆಗಿರಿ ಮೇಳದ ‘ಪ್ರಚಂಡ ಮಹಿಷಾಸುರ’ ಕನ್ನಡ ಪೌರಾಣಿಕ ನೂತನ ಪ್ರಸಂಗವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಬಿಡುಗಡೆಗೊಳಿಸಿದರು.

ಕೋಶಾಧಿಕಾರಿ ಪದ್ಮರಾಜ್ ಆರ್., ಮಾತನಾಡಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ವೈಭವದ ದಸರಾ ನಡೆಯುವ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಚಂಡ ಮಹಿಷಾಸುರ ಪ್ರಸಂಗ ಉದ್ಘಾಟನೆಗೊಂಡು ಪ್ರಪ್ರಥಮ ಪ್ರದರ್ಶನ ಕಾಣಬೇಕು ಎಂಬ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಮೇಳದ ಯಕ್ಷಗಾನ ಮಂಡಳಿಯ ಇಚ್ಛೆಗೆ ಅನುಗುಣವಾಗಿ ಶ್ರೀಕ್ಷೇತ್ರದಲ್ಲಿ ಪ್ರಪ್ರಥಮ ಪ್ರದರ್ಶನ ಗೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಗೆಜ್ಜೆಗಿರಿ ಮೇಳ ಪ್ರಾರಂಭಗೊಂಡ ಪ್ರಥಮ ವರ್ಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದಿದೆ ಎಂದರು.


ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಗೆಜ್ಜೆಗಿರಿ ಮೇಳದ ಸಂಚಾಲಕ ನವೀನ್ ಸುವರ್ಣ ಸಜಿಪ, ಪ್ರಸಂಗ ಕರ್ತ ನಿತಿನ್ ತೆಂಕಕಾರಂದೂರು, ಕಲಾವಿದರಾದ ದಿನೇಶ್ ರೈ ಕಡಬ, ನೈನಾಡು ಸತೀಶ್ ಪೂಜಾರಿ, ಗೆಜ್ಜೆಗಿರಿ ಮಂಗಳೂರು ನಗರ ವಲಯ ಸಂಚಾಲಕ ಹರೀಶ್ ಕೆ ಪೂಜಾರಿ, ಉರ್ವ ಬಿಲ್ಲವ ಸಂಘದ ಅಧ್ಯಕ್ಷ ಹರಿಪ್ರಸಾದ್, ಪ್ರಮುಖರಾದ ಸುರೇಶ್ ಕುಳಾಯಿ, ರಕ್ಷಿತ್ ಕೆ.ಬಿರ್ವ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು.

Related posts

ಕೃಷಿ ಪಂಪ್‌ ಸೆಟ್ ಸ್ಥಾವರಗಳಿಗೆ ಆಧಾರ್ ಲಿಂಕ್ ಜೋಡಣೆ ಮಾಡಲು ಆ.25 ಕೊನೆಯ ದಿನ

Suddi Udaya

ಜು.13: ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ಆಷಾಡ (ಆಟಿ) ಸೇಲ್: 10% ಫ್ಲ್ಯಾಟ್, 50-50 ಪ್ರತಿ ಖರೀದಿಯ ಮೇಲೆ ಡಿಸ್ಕೌಂಟ್

Suddi Udaya

ಕೊಡಗಿನ ಕುಶಾಲನಗರದಲ್ಲಿ ನಡೆದ ಸಂಪತ್ ಎಂಬವರ ಕೊಲೆ ಪ್ರಕರಣ: ಗುರುವಾಯನಕೆರೆಯ ಶಕ್ತಿನಗರದ ಪಿಜಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ ಕೊಡಗು ಪೊಲೀಸರು

Suddi Udaya

ಉಜಿರೆ: ರಾಜಾರಾಮ್ ಭಟ್ ನಿಧನ

Suddi Udaya

ಉರುವಾಲು: ಉಂಡೆಮನೆ ಶಂಕರ ನಾರಾಯಣ ಭಟ್ ರವರ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya
error: Content is protected !!