April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಶ್ರೀ ಧ. ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಜನ್ಮದಿನಾಚರಣೆ


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಜನ್ಮದಿನಾಚರಣೆ ಸಮಾರಂಭವನ್ನು ಎಸ್.ಡಿ.ಎಂ. ಡಿ.ಎಲ್.ಇಡಿ. ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ) ಉಜಿರೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಬಿ. ಸೋಮಶೇಖರ ಶೆಟ್ಟಿಯವರು ಆಗಮಿಸಿ ಹೆಗ್ಗಡೆಯವರು ನಾಡಿನ ಬೆಳಕು ಎಂದು ತಿಳಿಸಿದರು. ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ. ಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅವರ್ಣನೀಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರು ಹೆಗ್ಗಡೆಯವರು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಸ್ವಾಮಿ ಕೆ ಎ ಯವರು ವಹಿಸಿ ಹೆಗ್ಗಡೆಯವರು ದೂರದೃಷ್ಠಿಯುಳ್ಳವರು, ಆಧ್ಯಾತ್ಮ ಚಿಂತಕರು, ಅಭಿವೃದ್ಧಿಯ ಹರಿಕಾರ. ಆವರ ಮಾರ್ಗದರ್ಶನದಡಿಯಲ್ಲಿ ನಾವೆಲ್ಲ ಕೆಲಸ ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆ ಎಂದು ಹೇಳಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಡಿ.ಇಲ್.ಇಡಿ.ಯ ಪ್ರಶಿಕ್ಷಣಾರ್ಥಿ ಯತೀಕ್ಷಾ ಪ್ರಥಮ ಬಹುಮಾನವನ್ನು ಹಾಗೂ ಪ್ರಥಮ ಡಿ.ಇಲ್.ಇಡಿ.ಯ ಪ್ರಶಿಕ್ಷಣಾರ್ಥಿ ಅಂಬಿಕಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.
ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಪೂಜ್ಯ ಖಾವಂದರರ ಕೊಡುಗೆಗಳು ಎಂಬ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಡಿ.ಇಲ್.ಇಡಿ.ಯ ಪ್ರಶಿಕ್ಷಣಾರ್ಥಿಗಳಾದ ಅನುಷಾ ಪ್ರಥಮ ಬಹುಮಾನವನ್ನು ಮತ್ತು ಮುಜೈನಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಉಪನ್ಯಾಸಕವೃಂದ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜಲಜಾಕ್ಷಿ ಸ್ವಾಗತಿಸಿ, ಆರತಿ ವಂದಿಸಿ, ಅಶ್ವಿನಿ ಪಿ ಹೆಚ್ ನಿರೂಪಿಸಿದರು.

Related posts

ಮಾಲಾಡಿ ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಇಂದಬೆಟ್ಟು: ಸಮೃದ್ಧಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

Suddi Udaya

ಚಾರ್ಮಾಡಿ ಮುಹಿದ್ದಿನ್ ಜುಮ್ಮಾ ಮಸೀದಿಗೆ ನುಗ್ಗಿದ ತಂಡದಿಂದ ಧರ್ಮಗುರುಗಳ ಮೇಲೆ ಹಲ್ಲೆ

Suddi Udaya

ಮುಂಡ್ರುಪಾಡಿ ವಸಂತಿರವರ ಮನೆಯ ಮೇಲೆ ಬಿದ್ದ ಮರ: ಧರ್ಮಸ್ಥಳ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya
error: Content is protected !!