39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅರಸಿನಮಕ್ಕಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ: ನವಶಕ್ತಿ ಆಟೋ ಚಾಲಕ ಮಾಲಕ ಸಂಘದಿಂದ ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆ

ಅರಸಿನಮಕ್ಕಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯು ನ.23 ರಂದು ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುಟಾಣಿ ಹಿತ ಮಾಡಿದರು. ಸಭಾ ಅಧ್ಯಕ್ಷತೆಯನ್ನು ಪುಟಾಣಿ ಗೌತಮಿ ವಹಿಸಿದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಅನ್ನಪೂರ್ಣ, ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ರಾವ್, ಪಂಚಾಯತ್ ಸದಸ್ಯರಾದ ಶ್ರೀಮತಿ ಲಾವಣ್ಯ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಧರ್ಮರಾಜ್ ಅಡ್ಕಾಡಿ, ಆಶಾ ಕಾರ್‍ಯಕರ್ತೆ ಶ್ರೀಮತಿ ಸರೋಜಿನಿ ನಾಯ್ಕ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುನೀತಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನವಶಕ್ತಿ ಆಟೋ ಚಾಲಕ ಮಾಲಕ ಸಂಘದಿಂದ ಅಂಗನವಾಡಿ ಕೇಂದ್ರಕ್ಕೆ 20 ಬೇಬಿ ಚಯರ್ ಕೊಡುಗೆಯಾಗಿ ನೀಡಿದರು. ಐಸಿರಿ ಹೊಟೇಲ್ ಮಾಲಕರಾದ ಭಾಸ್ಕರ, ವಿಂದ್ಯಾ ಚಪ್ಪಲ್ ಸ್ಟ್ಯಾಂಟ್ ನೀಡಿದರು.

ಕಾರ್‍ಯಕ್ರಮವನ್ನು ಪ್ರವೀಣ್ ಕುಲಾಲ್ ನಿರೂಪಿಸಿದರು. ಶ್ರೀಮತಿ ರೇಷ್ಮಾ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಧನ್ಯವಿಜಯಾ ಧನ್ಯವಾದವಿತ್ತರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಜಲ ಅಭಿಯಾನ: ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಕರಪತ್ರ ಬಿಡುಗಡೆ

Suddi Udaya

ಅಂತರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಾಗಾರ

Suddi Udaya

ರಾಜಕೇಸರಿ ಟ್ರಸ್ಟ್ ವತಿಯಿಂದ ಪರಪಾದೆ ಶಾಲೆಯಲ್ಲಿ ಸ್ವಚ್ಛಾಲಯ ಅಭಿಯಾನ

Suddi Udaya

ಉಜಿರೆ: ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಮಾಲೋಚನಾ ಸಭೆ

Suddi Udaya

ಕುಪ್ಪೆಟ್ಟಿ ಸ.ಉ.ಪ್ರಾ.ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!