ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಕಂಬಳ: ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯರ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ, ಒಂದು ಲಕ್ಷ ನಗದು, 16 ಗ್ರಾಂ ಚಿನ್ನ ಮತ್ತು ಟ್ರೋಫಿ

Suddi Udaya

ಬೆಳ್ತಂಗಡಿ: ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಬೆಳ್ತಂಗಡಿ ತಾಲೂಕಿನ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯಿತು.

ಸಾವಿರಾರು ಜನರ ಜಯಘೊಷದ ನಡುವೆ ಪಾರಂಬೇರಿನ ಗುಂಡ ಮತ್ತು ಬಿಳಿಯೂರು ದಾಸ ಮಹರಾಜಕರೆಯಲ್ಲಿ ಜಯಗಳಿಸಿತು. ಧನಂಜಯ ಗೌಡ ಸರಪಾಡಿ ಕೋಣಗಳನ್ನು ಓಡಿಸಿದರು. ಸೆಮಿಫೈನಲ್ ಬೋಳದಗುತ್ತು ಮತ್ತು ನಾರಾಯಣ ಮಲೆಕುಡಿಯರ ಕೋಣಗಳು ತಲುಪಿತ್ತು. ನಾರಾಯಣ ಮಲೆಕುಡಿಯ ಅವರ ಕೋಣಗಳು ಗೆದ್ದು ಪೈನಲ್ ತಲುಪಿತು. ನಂತರ ರೋಚಕ ಫೈನಲ್‌ನಲ್ಲಿ ಮಹರಾಜಕರೆಯಲ್ಲಿ ಪರಂಬೇರು ನಾರಾಯಣ ಮಲೆಕುಡಿಯ ಅವರ ಕೋಣಗಳು ಮಹರಾಜ ಕರೆಯಲ್ಲಿ ಓಡಿ ಫೈನಲ್ ಗೆದ್ದಿತು.


ಫೈನಲ್ ಗೆದ್ದ ನಾರಾಯಣ ಮಲೆಕುಡಿಯ ಅವರ ಕೋಣವು ಒಂದು ಲಕ್ಷ ನಗದು, 16 ಗ್ರಾಂ ಚಿನ್ನ ಮತ್ತು ಟ್ರೋಫಿ ಗೆದ್ದಿದೆ. ನ.27 ಮುಂಜಾನೆ 4.30ಕ್ಕೆ ಬಹುಮಾನ ವಿತರಣೆ ನಡೆಯಿತು. ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಸಹಿತ ವಿವಿಧ ಗಣ್ಯರು ಬಹುಮಾನ ವಿತರಿಸಿದರು.

ಬೆಂಗಳೂರು ಕಂಬಳದಲ್ಲಿ ಫೈನಲ್ ತಲುಪಿ ಗೆದ್ದ ಕೊಣಗಳೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಗಳೂ ಗೆದ್ದವು. ಸಾಗಿದ್ದು ಕೋಣಗಳು ಮಾತ್ರ ಅಲ್ಲ. ತಳಸಮುದಾಯದಿಂದ ಬಂದ ಮಲೆಕುಡಿಯ ಸಮುದಾಯದ ಹೆಸರೂ ಆಗಿತ್ತು. ಮಲೆಕುಡಿಯ ಸಮುದಾಯದ ಕೋಣ ಮಲೆಕುಡಿಯರ ಹೆಸರಿನಲ್ಲೇ ಬೆಂಗಳೂರು ಕಂಬಳದಲ್ಲಿ ಓಡಲೇಬೇಕೆಂದು ಪಣತೊಟ್ಟವರು ಮಂಗಳೂರಿನ ಜನಪರ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು.

ಇತ್ತೀಚೆಗಷ್ಟೇ ಬಂಗಾಡಿ ಪಾರಂಬೇರಿಗೆ ಭೇಟಿ ನೀಡಿದ್ದ ಅವರು ಕೋಣಗಳನ್ನು ನೋಡಿ ಬೆಂಗಳೂರು ಕಂಬಳದಲ್ಲಿ ಪಾಲು ಪಡೆಯಲೇಬೇಕೆಂದು ಪಣತೊಟ್ಟು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲ, ಕಂಬಳ ಮುಗಿಯುವವರೆಗೂ ಜತೆಗೇ ಇದ್ದರು. ಕೊನೆಗೂ ವಿಶ್ವಾಸ, ಪ್ರೀತಿ ಗೆದ್ದಿತು. ಮಲೆಕುಡಿಯರ ಕೋಣಗಳೂ ಫೈನಲ್ ಗೆದ್ದು ರಾಜ್ಯಮಟ್ಟದ ಕಂಬಳದಲ್ಲಿ ಮತ್ತೊಮ್ಮೆ ಮಲೆಕುಡಿಯರ ಕೋಣವನ್ನು ಮಲೆಕುಡಿಯರ ಹೆಸರಿನಲ್ಲೇ ಓಡಿಸಿ ಸಮುದಾಯದ ಹೆಸರನ್ನು ಮತ್ತೊಮ್ಮೆ ರಾಜ್ಯವ್ಯಾಪಿ ಕೇಳಿಸುವಂತೆ ಮಾಡಿದರು. ಸಹಕಾರ ನೀಡಿದ ಪಾರಂಬೇರು ನಾರಾಯಣ ಮಲೆಕುಡಿಯರಿಗೂ, ಕಂಬಳದ ಜತೆಯಾದ ಸಂಬಂಧಿಗಳಿಗೂ, ಪ್ರಾಯೋಜಕತ್ವ ನೀಡಿ ಮಲೆಕುಡಿಯರ ಹೆಸರನ್ನು ರಾಜ್ಯವ್ಯಾಪಿ ಕೇಳಿಸುವಂತೆ ಮಾಡಿದ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರಿಗೂ, ಕೋಣ ಓಡಿಸಿದ ಸರಪಾಡಿ ಧನಂಜಯ ಗೌಡ ಅವರಿಗೂ ಮತ್ತು ಸಹಕರಿಸಿದ ಎಲ್ಲರಿಗೂ ಶೇಖರ್ ಎಲ್. ಕೃತಜ್ಞತೆ ಸಲ್ಲಿಸಿದ್ದಾರೆ.

Leave a Comment

error: Content is protected !!