September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಸ.ಪ.ಪೂ. ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ “ರಾಷ್ಟ್ರಪತಿ ಪದಕ” ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಗೆ ನುಡಿನಮನ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು,ನಡ ಇಲ್ಲಿನ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವತಿಯಿಂದ “ರಾಷ್ಟ್ರಪತಿ ಪದಕ” ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ.ವಿ.
ಪ್ರಾಂಜಲ್ ಗೆ ನುಡಿನಮನ ಸಲ್ಲಿಸಲಾಯಿತು.


ರೇಂಜರ್ ಲೀಡರ್ ಶ್ರೀಮತಿ ವಸಂತಿ ಪಿ. ಇವರು ಸೈನ್ಯಕ್ಕೆ ಸೇರುವ ಪ್ರಾಂಜಲ್ ನ ದೃಢನಿರ್ಧಾರವನ್ನು, ಶ್ರೀಮಂತಿಕೆಗೆ ಮನಸೋಲದ ದಿವ್ಯ ವ್ಯಕ್ತಿತ್ವ ವನ್ನು ವಿವರಿಸುತ್ತಾ, ಎಲ್ಲಾ ಯುವಕ ಯುವತಿಯರಿಗೆ ಅವರು ಆದರ್ಶವಾಗಬೇಕೆಂದು ಕರೆ ನೀಡಿದರು. ತದನಂತರ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಎಲ್ಲರೂ ಪ್ರಾಂಜಲ್ ನ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.


ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಶೇಖರ್ ಉಪ‌ಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಎಲ್ಲಾ ರೇಂಜರ್ಸ್ ವಿದ್ಯಾರ್ಥಿನಿಯರು ಸಹಕರಿಸಿದರು.

Related posts

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸುರೇಶ್ ವಿ ಅವರಿಗೆ ಸೇವಾ ನಿವೃತ್ತಿ, ಕಾಲೇಜಿನಲ್ಲಿ ಬಿಳ್ಕೋಡುಗೆ ಸಮಾರಂಭ, ಕಾಲೇಜು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ

Suddi Udaya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾ ಬಹು ನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ಪುತ್ತೂರಿನ ಬೆಡಗಿ ರಚನಾ ರೈ ನಾಯಕಿಯಾಗಿ ಅಭಿನಯ

Suddi Udaya

ಎಲ್‌.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಿಂದ ತಣ್ಣೀರುಬಾವಿ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಡಿ.17: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣರಿಗೆ ಹುಟ್ಟೂರ ಅಭಿನಂದನೆ

Suddi Udaya

ಕಲ್ಲೇರಿ ಶಾಖಾ ವ್ಯಾಪ್ತಿಯ ವಿದ್ಯುತ್ ನಿಲುಗಡೆ

Suddi Udaya

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೆಜ್ಜೆಗಿರಿ ಮಹಾ ಸಭೆ

Suddi Udaya
error: Content is protected !!