September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೈತರು ಆದಷ್ಟು ಬೇಗ ಫ್ರುಟ್ಸ್ ಐಡಿ ನೋಂದಣಿ ಮಾಡಬೇಕು ಹಾಗೂ: 18 ವರ್ಷವಾದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು: ಪೃಥ್ವಿ ಸಾನಿಕಂ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ರಾಜ್ಯ ಸರಕಾರದ ರೈತರು ತಮ್ಮ ಜಮೀನನ್ನು ಆಧಾರ್ ಲಿಂಕ್ ಮಾಡಿ ಆದಷ್ಟು ಬೇಗ ಫ್ರುಟ್ಸ್ ಐಡಿ ನೋಂದಣಿ ಮಾಡಬೇಕು ಹಾಗೂ ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಹೇಳಿದರು.

ಅವರು ನ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಲ್ಲಾ ರೈತರು ಫ್ರುಟ್ಸ್ ಐಡಿ ಮಾಡಿಸುವುದರಿಂದ ಪ್ರಾಕೃತಿಕ ವಿಕೋಪದಿಂದ ಬೆಳೆನಾಶವದಲ್ಲಿ ಸರಕಾರದಿಂದ ಈ ಯೋಜನೆಯ ಮೂಲಕ ನಿಮ್ಮ ಖಾತೆಗೆ ಹಣ ಜಮಾವಾಗುತ್ತದೆ. ನಿರ್ದಿಷ್ಟ ಎಕರೆಗೆ ಈ ಯೋಜನೆ ಸೀಮಿತವಾಗುದಿಲ್ಲ. ತಮ್ಮ ಐಡಿಯನ್ನು ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ,. ತೋಟಾಗಾರಿಕೆ ಇಲಾಖೆಯಲ್ಲಿ ಸಂಪರ್ಕಿಸಬಹುದು. ಐಡಿ ಮಾಡಲು ಆಧಾರ್‌ಕಾರ್ಡ್ ಮತ್ತು ಬ್ಯಾಂಕ್‌ಪಾಸ್‌ ಪುಸ್ತಕದ ಅವ್ಯಶಕತೆಯಿದೆ ಎಂದರು.

ಲೋಕಸಭೆ ಚುನವಾಣೆ ಬರುತ್ತಿದೆ 18 ವರ್ಷವಾದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು. ನೋಂದವಾಣಿ ಮಾಡಲು 1/4/2024 ಕೊನೆಯ ದಿನಾಂಕವಾಗಿದ್ದು ತಮ್ಮ ಹೆಸರನ್ನು ಹತ್ತಿರ ಬಿಎಲ್‌ಓ, ಕಾಲೇಜಿನಲ್ಲಿ, ತಾಲೂಕು ಕಚೇರಿಯ ಚುನಾವಾಣಾ ಕೇಂದ್ರದಲ್ಲಿ ದಾಖಲೆಯನ್ನು ಸಲ್ಲಿಸಬಹುದು. ಕಡತ ವಿಲೇವಾರಿಗಳು ತಡೆಯಾಗುವುದನ್ನು ತಪ್ಪಿಸಲು ಇ ಆಫೀಸ್ ತೆರದಿದೆ. ಅಧಿಕಾರಿಗಳು ಕಂಪ್ಯೂಟರ್‌ನಲ್ಲಿ ಇದನ್ನು ಅಳವಡಿಸಿದ್ದು ಯಾವ ಅಧಿಕಾರಿಗಳ ಬಳಿ ಎಷ್ಟು ಕಡತಗಳು ಬಾಕಿವೆ ಎಂದು ತಿಳಿಯುತ್ತದೆ. ತಿಂಗಳಿಗೆ ಒಮ್ಮೆ ಎಷ್ಟು ಕಡತಗಳು ಬಾಕಿವೆ ಎಂದು ನೋಡಲಾಗುತ್ತದೆ. ಕಡತವನ್ನು ಸಲ್ಲಿಸುವರು ಅಧಿಕಾರಿಗಳಿಂದ ಇ ಆಫೀಸ್ ನಂಬ್ರವನ್ನು ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

Related posts

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ಸಂಘಟನೆ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Suddi Udaya

ಮಹಿಳೆಯ ಕುತ್ತಿಗೆಯಿಂದ ಸರ ಎಳೆದು ಪರಾರಿ ಪ್ರಕರಣ: 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಧರ್ಮಸ್ಥಳ: ಟಾಟಾ ಸುಮೋ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ; ಚಂಡಿಕಾಹೋಮ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ತಾ| ಮಟ್ಟದ ಫುಟ್ ಬಾಲ್ ಪಂದ್ಯಾಟ

Suddi Udaya

ಮೇಲಂತಬೆಟ್ಟು ಬದಿನಡೆ ನಾಗಬ್ರಹ್ಮ ದೇವಸ್ಥಾನದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ, ಗರ್ಭಗುಡಿಯಲ್ಲಿ ನಾಗದೇವರ ಪ್ರತ್ಯಕ್ಷ

Suddi Udaya
error: Content is protected !!