ಲಾಯಿಲ: ವಿಶ್ವಕರ್ಮ ಸಮಾಜದ ಸಂಘಟನೆಗಳ ವತಿಯಿಂದ ಮತ್ತು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮದ ಅಭಿವೃದ್ಧಿ ಕಚೇರಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ಪಿ.ಎಮ್ ವಿಶ್ವಕರ್ಮ ಯೋಜನೆಯ ಮಾಹಿತಿ ಹಾಗೂ ಆನ್ಲೈನ್ ನೋಂದಾವಣೆ ಕಾರ್ಯಕ್ರಮವು ನ.28 ರಂದು ವಿಶ್ವಕರ್ಮ ಸಭಾಭವನ ಲಾಯಿಲದಲ್ಲಿ ನಡೆಯಿತು.
ವಿಶ್ರಾಂತ ತಹಶೀಲ್ದಾರರು ರಾಘವೇಂದ್ರ ಆಚಾರ್ಯ ಬಾರ್ಯ ಅಧ್ಯಕ್ಷತೆ ವಹಿಸಿದರು.
ಮಂಗಳೂರು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮದ ಅಭಿವೃದ್ಧಿ ಜಂಟಿ ನಿರ್ದೇಶಕ ದೇವರಾಜ್ ಕೆ ಮಾಹಿತಿ ನೀಡಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಕೌಶಲ್ಯಕ್ಕೂ ವಿಶ್ವಕರ್ಮ ದೇವರಿಗೂ ಹತ್ತಿರದ ಸಂಬಂಧವಿದೆ. ಜನರ ದಿನನಿತ್ಯದ ಬದುಕಿಗೆ ಎಲ್ಲಾ ರೀತಿಯಿಂದಲೂ ಪೂರಕವಾಗುವಂತಹ ವಿದ್ಯೆ,ಕೌಶಲ್ಯ ವಿಶ್ವಕರ್ಮ ದೇವರಿಂದಾಗಿ ಸಿಕ್ಕಿತು ಎಂದು ಹೇಳುವ ಹಿನ್ನೆಲೆಯಲ್ಲಿ ನಾವೆಲ್ಲ ಶ್ರದ್ದೆ ಭಕ್ತಿಯಿಂದ ವಿಶ್ವಕರ್ಮ ದೇವರನ್ನು ಆರಾಧನೆ ಮಾಡುತ್ತೇವೆ. ತರಬೇತಿಯ ಜೊತೆಗೆ ನೇರವಾಗಿ ದೇಶದ ಆದಾಯದ ಜೊತೆಗೆ ಪ್ರತಿನಿತ್ಯ ಬದುಕುವಂತಹ ದೃಷ್ಟಿಯಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಪೂರಕವಾದ ಸಂಗತಿಗಳು ಬೇಕು ಅದನ್ನು ದೊರಕಿಸುವ ದೃಷ್ಟಿಯಲ್ಲಿ ಈ ಯೋಜನೆಯನ್ನು ತಂದಿದ್ದಾರೆ ಇದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಬೆಳ್ತಂಗಡಿ ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಪುರೋಹಿತರು ವಿ. ಪ್ರಕಾಶ್, ಮಂಗಳೂರು ವಿಶ್ವಕರ್ಮ ಯುವ ಮಿಲನ್ ಉಪಾಧ್ಯಕ್ಷ ಮಂಜುನಾಥ ಆಚಾರ್ಯ, ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕ ಸಂಘ ಅಧ್ಯಕ್ಷ ಎಮ್.ಆನಂದ ಆಚಾರ್ಯ ಮಾಪಲಾಡಿ ಉಪಸ್ಥಿತರಿದ್ದರು.
ವಿಶ್ವಕರ್ಮಾಭ್ಯುದಯ ಸಭಾ(ರಿ.) ಕಾರ್ಯದರ್ಶಿ ಗಳಾದ ಶ್ರೀ ರಾಮ್ ಪ್ರಸಾದ್ ಎನ್.ಎಸ್ ಗುಂಪಲಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.