April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಕಲ್ಮoಜದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

ಕಲ್ಮoಜ: ವಿವಿಧ ಸರಕಾರಿ ಸೇವೆಗಳ ಅರ್ಜಿ ಹಾಕಲು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಇದರ ಉದ್ಘಾಟನೆ ಕಲ್ಮoಜ ಪಂಚಾಯತ್ ಕಟ್ಟಡದಲ್ಲಿ ನ.30ರಂದು ನಡೆಯಿತು.

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ ರವರು ರಿಬ್ಬನ್ ಕತ್ತರಿಸುವ ಮುಖಂತರ ಅಧಿಕೃತವಾಗಿ ಚಾಲನೆ ನೀಡಿ ಕಂಪ್ಯೂಟರ್ಗಳನ್ನು ಉದ್ಘಾಟನೆ ಗೊಳಿಸಿದರು. ಮಾತೃಶ್ರೀ ವಸಂತಿ ದೀಪ ಬೆಳಗಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲ, ಸದಸ್ಯರಾದ ರಾಧಾಕೃಷ್ಣ ಗೌಡ, ಯುವವಾಹಿನಿ ಅಧ್ಯಕ್ಷರಾದ ಅಶ್ವಥ್ ಕುಮಾರ್,ಗ್ರೇಸಿಯನ್ ವೇಗಸ್,ಹರೀಶ್ ಸುವರ್ಣ ಕನ್ಯಾಡಿ, ಯಶೋಧರ ಚಾರ್ಮಾಡಿ,ಪದ್ಮ ಪೂಜಾರಿ ಕಡಂಬು,ರಮಾನಂದ ಪೂಜಾರಿ,ಸಂತೋಷ್ ಪೂಜಾರಿ ಕಡಂಬು,ಅಶೋಕ್ ಕುಮಾರ್, ರಾಘವೇಂದ್ರ ಹುಂಕ್ರೋಟ್ಟು,ಸಂದೀಪ್ ಗುರಿಪಳ್ಳ. ಉಮೇಶ್ ಕುಲಾಲ್,ಸುದೀಶ್, ಸುಜಯ ಮನೋಹರ್,ಹರೀಶ್ ಸಾಲ್ಯಾನ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಶಿಧರ್ ಕಲ್ಮoಜ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮಾ,ಸದಸ್ಯರಾದ ಶ್ರೀಧರ್ ಮಡಿವಾಳ, ಪ್ರವೀಣ್ ಗೌಡ ಆಗಮಿಸಿ ಶುಭಹಾರೈಸಿದರು ಹಾಗೂ ಊರವರು ಉಪಸ್ಥಿತರಿದ್ದರು.

ಮಾಲಕರಾದ ಮಾಧವಿ ಸುನೀಲ್ ಸ್ವಾಗತಿಸಿ ಸುನೀಲ್ ಕನ್ಯಾಡಿ ವಂದಿಸಿದರು.

Related posts

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಂಘ ಉಜಿರೆ ವತಿಯಿಂದ ಆಹಾರೋತ್ಸವ ಕಾರ್ಯಕ್ರಮ

Suddi Udaya

ಡಿ.17: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿ ಕಾಲೇಜಿನ ವಾರ್ಷಿಕ ದಿನಾಚರಣೆ

Suddi Udaya

ಧರ್ಮಸ್ಥಳ :ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ

Suddi Udaya

ಪ್ರದೀಶ್ ಮಾರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya

ಕಣಿಯೂರು ವಲಯದ ಅಂಡೆತಡ್ಕ ಕಾರ್ಯಕ್ಷೇತ್ರದಲ್ಲಿ ಸೃಜನಾ ಶೀಲಾ ಕಾರ್ಯಕ್ರಮ

Suddi Udaya

ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!