30.3 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಮೂಡಬಿದ್ರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕಲ್ಲಬೆಟ್ಟು ಇಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಏಕಪಾತ್ರ ಅಭಿನಯದಲ್ಲಿ ದ್ವಿತೀಯ ಪಿಯುಸಿಯ ಋತ್ವಿಕ್ ಶೆಟ್ಟಿ ಮತ್ತು ಪ್ರಥಮ ಪಿಯುಸಿಯ ಸಾತ್ವಿಕ್ ಎಂ ಪ್ರಥಮ ಸ್ಥಾನವನ್ನು ಹಾಗೂ ಕನ್ನಡ ಪ್ರಬಂಧದಲ್ಲಿ ಪ್ರಥಮ ಪಿಯುಸಿಯ ಸುರಕ್ಷಿತ ಪ್ರಥಮ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ದ್ವಿತೀಯ ಪಿಯುಸಿ ವಿಭಾಗದ ಆಶುಭಾಷಣದಲ್ಲಿ ನೆವಿಲ್ ನವೀನ್ ಮೋರಸ್ ದ್ವಿತೀಯ, ಜನಪದ ಗೀತೆಯಲ್ಲಿ ಧನುಷ್ ತೃತೀಯ, ಕನ್ನಡ ಪ್ರಬಂಧದಲ್ಲಿ ಶರಣ್ಯ ತೃತೀಯ ಹಾಗೂ ಪ್ರಥಮ ಪಿಯುಸಿ ವಿಭಾಗದ ಆಶುಭಾಷಣದಲ್ಲಿ ವಿಭಾ. ಕೆ. ಆರ್ ತೃತೀಯ, ಭಾವಗೀತೆಯಲ್ಲಿ ಸಮನ್ವಿತ್ ಕುಮಾರ್ ತೃತೀಯ, ಚರ್ಚಾ ಸ್ಪರ್ಧೆಯಲ್ಲಿ ಸಾಹಿತ್ಯ ಕುಶಾಲ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Related posts

ಬೆಳ್ತಂಗಡಿ: ಅರ್ಸುಲೈನ್ ಧರ್ಮಭಗಿನಿ ಸಿ. ಎಮಿಲ್ಡಾ ಕ್ರಾಸ್ತಾ ನಿಧನ

Suddi Udaya

ಕರಂಬಾರು ಗುತ್ತು ಸುಮಿತ್ರ ಹೆಗ್ಡೆಯವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ

Suddi Udaya

ಬಳಂಜ ಬದಿನಡೆ ಕ್ಷೇತ್ರದಲ್ಲಿಪ್ರಶ್ನಾ ಚಿಂತನೆ

Suddi Udaya

ಜಾರಿಗೆ ಬೈಲು ಸಮೀಪ ಟ್ಯಾಂಕರ್, ಕಾರು ಡಿಕ್ಕಿ

Suddi Udaya

ಜೂ.21: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನೆ

Suddi Udaya

ಡಿ.10: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!