37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳಾಲು: ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು: ಡಿ.25 ಮತ್ತು 26 ರಂದು ನಡೆಯುವ ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಪ್ರಧಾನ ಸಂಚಾಲಕ ದೇಜಪ್ಪ ಗೌಡ ಅರಣೆಮಾರು ವಹಿಸಿದರು.

ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ಜೈನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ನೋಟರಿ ವಕೀಲ ಶ್ರೀನಿವಾಸ ಗೌಡ, ಉಪಾಧ್ಯಕ್ಷ ಮಮತ ದಿನೇಶ್ ಪೂಜಾರಿ ಉಪ್ಪಾರ್, ಸಮಿತಿಯ ಹಿರಿಯ ಸದಸ್ಯ ಎನ್. ಜತ್ತಣ್ಣ ಗೌಡ ಏರ್ದೊಟ್ಟು, ಮಹಿಳಾ ಸಮಿತಿ ಗೌರವಾಧ್ಯಕ್ಷ ವಿದ್ಯಾ ಶ್ರೀನಿವಾಸ ಗೌಡ, ಭಜನಾ ಮಂಡಳಿ ಅಧ್ಯಕ್ಷ ನವೀನ್ ಗೌಡ ಕಂಬಳದಡ್ಡ, ಶ್ರೀ ಕ್ಷೇ. ಧ.ಗ್ರಾ. ಯೋಜನೆ ಬೆಳಾಲು ಇದರ ಸೇವಾ ನಿರತೆ ಆಶಾ, ಮಾಯ ಮಹಾದೇವ ದೇವಸ್ಥಾನ ಸಮಿತಿ ಸದಸ್ಯ ಶಿವಕುಮಾರ್ ಬಾರಿತ್ತಾಯ ಪಾರಳೆ, ಹಿರಿಯ ಸದಸ್ಯ ಕುಂಜಿಬೊಟ್ಟು ಉದಿತ್ ಕುಮಾರ್ ಜೈನ್, ಲಿಂಗಪ್ಪ ಪೂಜಾರಿ ಬನಂದೂರು, ದೇಜಪ್ಪ ಗೌಡ ಎಳ್ಳುಗದ್ದೆ ಹಾಗೂ ಬೈಲುವಾರು ಸಮಿತಿ ಸಂಚಾಲಕರು-ಸಹಸಂಚಾಲಕರು, ಜಾತ್ರೆ ಉಪಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


ಸಮಿತಿ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿ, ಶಿವಪ್ರಸಾದ್ ಕೆ ಹಾಗೂ ನಾರಾಯಣ ಗೌಡ ಎಳ್ಳುಗದ್ದೆ ಕಾರ್ಯಕ್ರಮ ನಿರೂಪಿಸಿ, ಉಮೇಶ್ ಜಿ. ಮಂಜೊತ್ತು ವಂದಿಸಿದರು.

Related posts

ಉಜಿರೆಯ ಮುಹಮ್ಮದ್ ನಿಶ್ವಾನ್ ರವರಿಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಟವರ್ ಮೇಲೆ ಬಿದ್ದ ಮರ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗಾಯ

Suddi Udaya

ನಾಲ್ಕೂರು: ಸೂಳಬೆಟ್ಟು ಡೆಪ್ಪುಣಿ ಬಸ್ ತಂಗುದಾನದ ಬಳಿ ವಾಮಾಚಾರ

Suddi Udaya

ಹತ್ಯಡ್ಕ ಬೂತ್ 216 ರ ಬಿಜೆಪಿ ಮಹಿಳಾ ಸಂಚಾಲಕಿಯಾಗಿ ಸುಜಾತಾ ಎಸ್. ಆಯ್ಕೆ

Suddi Udaya

ವೇಣೂರು ಎಸ್.ಡಿ.ಎಂ ಐಟಿಐ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಉಮೇಶ್ ಕೆ. ರವರಿಗೆ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ ಆನ್ ಸಿಲ್ಕ್ ಆಷಾಢ ಬಂಪರ್ ಸೇಲ್ ಕೆಲ ದಿನಗಳವರೆಗೆ ವಿಸ್ತರಣೆ: ಶೇ.50 ಖರೀದಿಗಾಗಿ ಜನರ ಬಾರಿ ಬೆಂಬಲ

Suddi Udaya
error: Content is protected !!