ಬೆಳ್ತಂಗಡಿ : ಮುಳಿಯ ಜುವೆಲ್ಸ್ ನಲ್ಲಿ “ಕನ್ನಡ ಬದುಕು ಬಂಗಾರ” ಕಾವ್ಯ, ಗಾನ, ಕುಂಚ, ನೃತ್ಯ, ಸಾಂಸ್ಕೃತಿಕ ವೈಭವವು ಡಿ.2ರಂದು ನಡೆಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಪುಂಜಾಲಕಟ್ಟೆ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಕೆ ಶರತ್ ಕುಮಾರ್ ಹಾಗೂ ಉಜಿರೆ ಶ್ರೀ .ಧ.ಮಂ.ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕರು ಮಹಾವೀರ ಜೈನ್ ಇಚ್ಚಂಪಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಬೆಳಾಲು ಎಸ್ ಡಿ ಎಮ್ ಹೈಸ್ಕೂಲ್ ನ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ಮುಂಡೂರು ಶಾಲೆ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ ಬಿ, ಬಂದಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ಹಾಗೂ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಬಂಗಾಡಿ ನಾರಾಯಣ ಮಲೆಕುಡಿಯ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾರ್ಕೆಟಿಂಗ್ ಕನ್ಸಲ್ವೆಂಟ್ ವೇಣು ಶರ್ಮ ಉಪಸ್ಥಿತರಿದ್ದರು.
ಬೆಳ್ತಂಗಡಿ ಮುಳಿಯ ಶಾಖಾ ವ್ಯವಸ್ಥಾಪಕ ಅಶೋಕ್ ಬಂಗೇರ ಸ್ವಾಗತಿಸಿ, ಉಪ ವ್ಯವಸ್ಥಾಪಕ ಲೋಹಿತ್ ಕುಮಾರ್ ವಂದಿಸಿ, ಡೈಜಿವರ್ಲ್ಡ್ ನ ಲೋಹಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.