ಚಾರ್ಮಾಡಿ ಗ್ರಾ.ಪಂ ಸಭಾಂಗಣದಲ್ಲಿ 2022-23ನೇ ಸಾಲಿನ 15 ಹಣಕಾಸು ಯೋಜನೆಯ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಜರುಗಿತು.
ಈ ಸಂದರ್ಭದಲ್ಲಿ ನರೇಗಾ ಯೋಜನೆ ಕುರಿತು ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಸಭೆಯ ನೋಡಲ್ ಅಧಿಕಾರಿಯವರಾದ ಕೆ.ಎಸ್ ಚಂದ್ರಶೇಖರ್ ಹಿರಿಯ ಸಹಾಯಕ ನಿರ್ದೇಶಕರು , ತೋಟಗಾರಿಕಾ ಇಲಾಖೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶಾರಾದ, ಉಪಾಧ್ಯಕ್ಷರಾದ ಶ್ರೀಮತಿ ನೀಲು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಜಿ, ಕಾರ್ಯದರ್ಶಿ ಕುಂಜ್ಞ ಕೆ ,ಸಾಮಾಜಿಕ ಲೆಕ್ಕ ಪರಿಶೋಧನಾ ಶಾಖಾ ಪ್ರಬಂಧಕರು ಶ್ರೀಮತಿ ಜಯಲಕ್ಷ್ಮಿ,ತಾಂತ್ರಿಕ ಸಹಾಯಕರು ಶ್ರೀಮತಿ ರೇಷ್ಮಾ ರಾಜ್ , ತಾಲೂಕು ನರೇಗಾ ಐಇಸಿ ಸಂಯೋಜಕರು ಶ್ರೀಮತಿ ವಿನಿಷ, ಗ್ರಾ.ಪಂ ಸಿಬ್ಬಂದಿಗಳು, ಪಂಚಾಯತ್ ಸದ್ಯಸ್ಯರುಗಳು ಸಾಮಾಜಿಕ ಲೆಕ್ಕ ಪರಿಶೋಧನಾ ಸಿಬ್ಬಂದಿಗಳು ಹಾಗೂ ಮಹಾತ್ಮಗಾಂಧಿ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.