April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

ಕುತ್ಲೂರು : ಕರ್ನಾಟಕ ಅರಣ್ಯ ಇಲಾಖೆ, ಕುಂದಾಪುರ ವಿಭಾಗ ಮೂಡಬಿದ್ರೆ ಉಪವಿಭಾಗ, ಕುತ್ಲೂರು ಗ್ರಾಮ ಅರಣ್ಯ ಸಮಿತಿ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.4 ರಂದು ಮಂಜುಶ್ರೀ ಸಭಾಭವನ ಕುತ್ಲೂರಿನಲ್ಲಿ ಸಮಿತಿಯ ಅಧ್ಯಕ್ಷ ಶ್ರೀಧರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.


ವೇದಿಕೆಯಲ್ಲಿ ಕಾರ್ಯಕ್ರಮಗಳ ತಾಲೂಕು ವ್ಯವಸ್ಥಾಪಕಿ ಶ್ರೀಮತಿ ಪ್ರತಿಮಾ ಮಾತನಾಡಿ ಸಂಜೀವಿನಿ ಮುಖಾಂತರ ಸ್ವಸಹಾಯ ಸಂಘಗಳಿಗೆ ಬರುವ ಅನುದಾನಗಳ ಸಂಕ್ಷಿಪ್ತ ಮಾಹಿತಿಯನ್ನುನೀಡಿದರು.

ಗ್ರಾಮ ಅರಣ್ಯ ಸಮಿತಿಯ ಸದಸ್ಯ ಕಾರ್ಯದರ್ಶಿ ಕುಶಾಲಪ್ಪ ಗೌಡ, ನಾರಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಲತಾ, ಪಂಚಾಯತ್ ಸದಸ್ಯ ಸಂತೋಷ, ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ರಾಜಶ್ರೀ, ಹಾಗೂ ಅಂಡಿಂಜೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಂಗಗಳ ಹಾಗೂ ಕಾಡುಹಂದಿಯ ಹಾವಳಿಯ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಅರಣ್ಯ ಸಮಿತಿ ಸದಸ್ಯ ಕೇಶವ ಕಾರ್ಯಕ್ರಮ ನಿರೂಪಿಸಿ, ರೋಹನ್ ಸ್ವಾಗತಿಸಿ, ಆನಂದ ಸಾಲ್ಯಾನ್ ವಂದನಾರ್ಪಣೆಗೈದರು.

Related posts

ವಾಣಿ ಪ.ಪೂ. ಕಾಲೇಜಿನ ಎನ್‌.ಎಸ್.ಎಸ್‌. ಘಟಕದಿಂದ ಕೋಟಿ ವೃಕ್ಷ ಅಭಿಯಾನ

Suddi Udaya

ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಡಿಆರ್ ಡಿಒ ಆಯೋಜಿಸಿದ ಡೇರ್ ಟು ಡ್ರೀಮ್ 5.0; ಭಾರತದ ಬಿಗ್ಗೆಸ್ಟ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಇನ್ನೋವೇಶನ್ ಸ್ಪರ್ಧೆಯಲ್ಲಿ ಪಟ್ರಮೆಯ ದೀಪಕ್ ಭಾಗಿ

Suddi Udaya

ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನ: ಕುವೆಟ್ಟು ನಿವಾಸಿ ಮೊಹಮ್ಮದ್ ರಫೀಕ್ ಬಂಧನ

Suddi Udaya

ಚಾರ್ಮಾಡಿಯಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಶುಭಾರಂಭ

Suddi Udaya

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ‘ಸೇಪ್ಟಿ ರೈಡ್’ ಜಾಗೃತಿ ಅಭಿಯಾನ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ‘ದಿ ಕೇರಳ ಸ್ಟೋರಿ’ ಚಲನಚಿತ್ರ ಉಚಿತ ಪ್ರದರ್ಶನ

Suddi Udaya
error: Content is protected !!