April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಧರ್ಮಸ್ಥಳ: ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಆಚರಣೆ

ಧರ್ಮಸ್ಥಳ: ಇಲ್ಲಿಯ ಚಂದ್ರಗಿರಿ ನಗರದಲ್ಲಿರುವ ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮವನ್ನು ಆಚಾರಿಸಲಾಯಿತು.

ಪುಟಾಣಿ ಅಧ್ವಿಕ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರೀತಮ್ ಡಿ, ದೀಪ ಬೆಳಗಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕ್ಷೀರ ಭಾಗ್ಯ ಹಾಲಿನ ಡೈರಿ ಅಧ್ಯಕ್ಷ ದೇವಸ್ಯ ಟಿ ವಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ, ಪಂಚಾಯತ್ ಸದಸ್ಯರಾದ ದಿನೇಶ್ ರಾವ್, ಸುಧಾಕರ ದೇವಾಡಿಗ ಶ್ರಮಿಳಾ ಜೈನ್, ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯ ಮೋನಪ್ಪ ಗೌಡ, ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಎಚ್ ಮಂಜು,
ಎಲ್ ಎಚ್ ವಿ ವಿಜಯಲಕ್ಷ್ಮಿ, ಆಯುಷ್ಮಾನ್ ಭಾರತ್ ಸಿಬ್ಬಂದಿ ಶ್ರೀಮತಿ ಜ್ಯೋತಿ, ಜಮಾ ಉಗ್ರಾಣ ಮಾಜಿ ಮುತ್ಸದ್ದಿ ಹಾಗೂ ಕಲಾ ಪೋಷಕರಾದ ಬಿ ಭುಜಬಲಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರೇವತಿ ಹಾಗೂ ಸರ್ವ ಸದಸ್ಯರು, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮಲ್ಲಿಕಾ, ಸುಜಾತ, ಧನಲಕ್ಷ್ಮೀ, ಜಯಂತಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ಪುಟಾಣಿ ಮಕ್ಕಳು, ಸಹಾಯಕಿ ಬಾಗ್ಯ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪುಟಾಣಿಗಳಾದ ಆರ್ಯನ್, ಆರಾಧ್ಯ ಪೋಷಕರಿಂದ ಅಂಗನವಾಡಿಗೆ ಫ್ಯಾನ್, ಹಾಗೂ ಬೇಬಿ ಶ್ರೇಯ ರವರ ಪೋಷಕರಿಂದ ಕುಡಿಯುವ ನೀರಿನ ಫಿಲ್ಟರನ್ನು ಕೊಡುಗೆಯಾಗಿ ನೀಡಿದರು.

ಶ್ರೀಮತಿ ಸಂಧ್ಯಾ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬಿಂದು ಸ್ವಾಗತಿಸಿದರು. ಶ್ರೀಮತಿ ಆಶಾ ಅಶೋಕ್ ಧನ್ಯವಾದವಿತ್ತರು.

Related posts

ಲಾಯಿಲ ಜಿ.ಪಂ. ವ್ಯಾಪ್ತಿಯ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಮತಯಾಚನೆ

Suddi Udaya

ಕುವೆಟ್ಟು ಗ್ರಾ.ಪಂ. ನಿಂದ ಸಹಾಯಧನ ಹಸ್ತಾಂತರ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಹದಿಮೂರನೇ ಸುತ್ತಿನಲ್ಲಿ 13162 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ

Suddi Udaya

ಜೆಸಿಐ ಬೆಳ್ತಂಗಡಿಯಲ್ಲಿ ಶ್ರಾವಣ ತರಬೇತಿ ಸಪ್ತಾಹದ ಸಮಾರೋಪ ಕಾರ್ಯಕ್ರಮ

Suddi Udaya

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ

Suddi Udaya
error: Content is protected !!