ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ಲಾಯಿಲದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ & ಪಂಚಾಯತ ರಾಜ್ ಸಂಸ್ಥೆ, ಮೈಸೂರು ವತಿಯಿಂದ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಗ್ರಾಮಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಪುನಶ್ಚೇತನ ತರಬೇತಿ ಮತ್ತು ಗ್ರಾಮ ಪಂಚಾಯತ್ ಮಟ್ಟದ ಕೂಸಿನ ಮನೆ ನಿರ್ವಾಹಕರ (ಶಿಶುಪಾಲನಾ ಕೇಂದ್ರ) ತರಬೇತಿಯು ನಡೆಯುತ್ತಿದ್ದು, ಸದರಿ ವೀಕ್ಷಣೆಗೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಇವರು ಭೇಟಿ ನೀಡಿ ತರಬೇತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಜಿ.ಪಂ.ನ ಸಹಾಯಕ ಜಿಲ್ಲಾ ಯೋಜನಾ ಸಂಯೋಜಕ ಕಿಶನ್ ರಾವ್, ತರಬೇತುದಾರರು ಹಾಗೂ ತರಬೇತಿ ಕೇಂದ್ರದ ಪ್ರಾಂಶುಪಾಲ ಶ್ರೀ ಸೋಮನಾಥ ಕೆ ಉಪಸ್ಥಿತರಿದ್ದರು.