ನಿಡ್ಲೆ: ಚಾಲ್ತಿಯಲ್ಲಿ ಇಲ್ಲದೇ ಇರುವ ಸಂಸ್ಥೆಯ ಹೆಸರಲ್ಲಿ ದೇಣಿಗೆ ಸಂಗ್ರಹಿಸಲು ಬಂದ ಇಬ್ಬರು ಯುವಕರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿಡ್ಲೆ ಗ್ರಾಮದ ಪರಾಂಡ ನಿವಾಸಿ ಧನುಷ್ (24) ಎಂಬವರ ದೂರಿನಂತೆ, ಡಿ.07 ರಂದು ಸಂಜೆ ಸಮಯ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪರಾಂಡ ಎಂಬಲ್ಲಿ ತಮ್ಮ ಮನೆಯಲ್ಲಿರುವಾಗ, ಇಬ್ಬರು ಯುವಕರು ಬಂದು ನಾವು ಬೆಂಗಳೂರಿನಲ್ಲಿರುವ ಸ್ವಾಮಿವಿವೇಕಾನಂದ ಎಂಬ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಇದರ ವತಿಯಿಂದ ದೇಣಿಗೆ ಸಂಗ್ರಹಣೆಗೆ ಬಂದಿದ್ದು, ದೇಣಿಗೆ ನೀಡುವಂತೆ ಕೇಳಿದಾಗ, ಪಿರ್ಯಾದಿದಾರರು ಸಂಶಯಗೊಂಡು ಅವರಲ್ಲಿದ್ದ ಸಂಸ್ಥೆಯದ್ದೆಂದು ಹೇಳಲಾದ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ನಾವು ಯಾರನ್ನೂ ಕಳುಹಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಚಾಲ್ತಿಯಲ್ಲಿ ಇಲ್ಲದೇ ಇರುವ ಸಂಸ್ಥೆಯ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದಾಗಿ ಆರೋಪಿತರ ಮೇಲೆ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 99/2023 ಕಲಂ: 420 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.