25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕಾರ್ಯಾಚರಣೆ ನಡೆಸಿ ಪೊಲೀಸರಿಗೊಪ್ಪಿಸಿದ ಶೌರ್ಯ ಸ್ವಯಂಸೇವಕರು

ಬೆಳ್ತಂಗಡಿ: ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಇಂದು(ಡಿ .10) ಬೆಳಿಗ್ಗೆ ಪತ್ತೆಯಾಗಿದೆ.

ಜನರು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಶವ ತೇಲಿ ಬರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶವ ತೆಗೆಯುವ ಕಾರ್ಯಾಚರಣೆಗೆ ಸಹಕರಿಸಲು ಪೊಲೀಸರು ಉಜಿರೆ ಘಟಕ ಪ್ರತಿನಿಧಿ ರವೀಂದ್ರ ಇವರಿಗೆ ಬೆಳಿಗ್ಗೆ 5.30 ರ ವೇಳೆಗೆ ಫೋನ್ ಕರೆ ಮಾಡಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಇವರು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರಾದ ಶಿಶಿಲ-ಅರಿಸಿನಮಕ್ಕಿ ಘಟಕದ ಅವಿನಾಶ್ ಬಿಡೆ, ಉಜಿರೆ ಘಟಕದ ರಾಘವೇಂದ್ರ, ಶಶಿಕುಮಾರ್ ಇವರೊಂದಿಗೆ ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.

ಪೊಲೀಸ್ ಠಾಣಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮಕ್ಕಾಗಿ ಶವವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

Related posts

ಉಜಿರೆ ರುಡ್ ಸೆಟ್ ಬಳಿ ಕಾರುಗಳು ಪರಸ್ಪರ ಡಿಕ್ಕಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya

ಬಂದಾರು: ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಮತಪ್ರಚಾರ

Suddi Udaya

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಕೈಯಿಂದ ಕಾರಿನ ಗಾಜು ಒಡೆದ ವಿವಾದ – ಐವರ‌ ವಿಚಾರಣೆ ಪರಸ್ಪರ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಐತಿಹಾಸಿಕ ಕಾಜೂರು ಮಖಾಂ ಉರೂಸ್ ಉದ್ಘಾಟನೆ: ಅಲ್ಲಾಹನ‌ ನೋಟ ಹೃದಯಕ್ಕೆ ಮಾತ್ರ; ವೈಎಂಕೆ ಡಾ. ಅಬ್ದುಲ್ಲ ಕುಂಞಿ

Suddi Udaya
error: Content is protected !!