32.9 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಡಿ. 17: ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಸಭಾಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ

ಬೆಳ್ತಂಗಡಿ: ಡಿ. 17 ರಂದು ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಸಭಾಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ ವಿವಿಧ ವೈವಿಧ್ಯಮಯ ಕಾಯ೯ಕ್ರಮಗಳೊಂದಿಗೆ ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಭಟ್ ಕಯ್ಯೂರು ಹೇಳಿದರು.


ಅವರು ಡಿ. 11ರಂದು‌ ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಹಿರಿಯರ ಜೀವನವು ಕಾಲಹರಣವಾಗದೇ ಆತ್ಮಗೌರವದೊಂದಿಗೆ ಅವರಲ್ಲಿರುವ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಶಕ್ತಿಗಳು ಸಮಾಜಕ್ಕೆ ಬಳಕೆಯಾಗಬೇಕು ಮತ್ತು ನಿರಾಶೆಯನ್ನು ಬಿಟ್ಟು ಆಶಾವಾದವನ್ನು ಹೊಂದುವಂತಗಾಬೇಕು ಎಂಬ ಉದ್ದೇಶದಿಂದ ಪ್ರತಿಷ್ಠಾನವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಪ್ರತಿಷ್ಠಾನದ ಸದಸ್ಯರಾಗಿ ತಮ್ಮ ಕ್ಷೇತ್ರದ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವಿದೆ. ಕಾಸರಗೋಡು ಮತ್ತು ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರತಿಷ್ಠಾನದ ಘಟಕಗಳಿದ್ದು ಸೇವಾಕಾರ್ಯಗಳನ್ನು ನಡೆಸುತ್ತಿದೆ‌ ಎಂದು ವಿವರಿಸಿದರು.
2021 ಡಿ.18ರಲ್ಲಿ ಅಳಿಕೆಯ ಸತ್ಯಸಾಯಿ ವಿಹಾರದಲ್ಲಿ ಹಿರಿಯರ ಸಮಾವೇಶದೊಂದಿಗೆ ಉದ್ಘಾಟನೆಯಾದ ಈ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವವು ಡಿ .17ರಂದು ಪೂರ್ವಾಹ್ನ ಗಂಟೆ 10 ರಿಂದ ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಸಭಾಭವನದಲ್ಲಿ ಜರಗಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಲಿದ್ದಾರೆ .ಸೌತಡ್ಕ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ರಾವ್ ಯಂ. ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ ಅತಿಥಿಗಳಾಗಿದ್ದು ಭಾ. ಜೀವ ವಿಮಾ ನಿಗಮದ ಬೆಳ್ತಂಗಡಿ ಬ್ರಾಂಚ್ ಮೇನೇಜರ್ ವಿ.ಎಸ್. ಕುಮಾರ್ ಇವರಿಂದ ವಿಶೇಷ ಉಪನ್ಯಾಸವಿರುತ್ತದೆ ಎಂದರು.


ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ:
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ರಾಜೇಂದ್ರ ಕಲ್ಲೂರಾಯ, ಕೆ. ಜಯರಾಮ ಶೆಟ್ಟಿ ಉಳ್ಳಾಲ ಮಾಜಿ ಶಾಸಕದ ಬಾಹುಬಲಿ ಪ್ರಸಾದ್ ಮೂಡಬಿದಿರೆ, ವಸಂತ ಸುವರ್ಣ ಬೆಳ್ತಂಗಡಿ, ಡಾ. ರಂಗಯ್ಯ ಸುಳ್ಯ, ರಾಜಮಣಿ ರಾಮಕು ಬಂಟ್ವಾಳ, ಮಧೂರು ಮೋಹನ ಕಲ್ಲೂರಾಯ, ಸುರೇಶ ಬೈಂದೂರ, ಉಮೇಶ ಶೆಣೈ ಯನ್. ಉಪ್ಪಿನಂಗಡಿ, ಬಿ.ಕೇಶವ ಶಬರಾಯ ಸೌತಡ್ಕ, ಯಂ. ವೈ. ರಾಮಕೃಷ್ಣ ಸೌತಡ್ಕ, ಶ್ರೀಮತಿ ವಿನೋದ ಕೆ. ಶೆಟ್ಟಿ ಸೌತಡ್ಕ, ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪಟ್ಟಾಭಿರಾಮ ಸುಳ್ಯ ಇವರಿಂದ ಮಿಮಿಕ್ರಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘ, ಉಪ್ಪಿನಂಗಡಿ ಇವರಿಂದ ರಾಜಸೂಯಧ್ವರ ತಾಳಮದ್ದಳೆ ಜರಗಲಿದೆ ಎಂದು ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಜಯರಾಮ ಭಂಡಾರಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಸಂಚಾಲಕ ವಸಂತ ಸುವರ್ಣ, ಕಾಯ೯ಕಾರಿ ಸಮಿತಿ ಸದಸ್ಯ ವೇದವ್ಯಾಸ ಉಪಸ್ಥಿತರಿದ್ದರು.

Related posts

ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ನ.4 -5 : ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಮಾನ್ಯ ಸಭೆ

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಮತ್ತು ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ

Suddi Udaya

ನಾಲ್ಕೂರು: ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು

Suddi Udaya

ವೇಣೂರು: ಸಂಜೀವ ಪಿ ಹೆಗ್ಡೆ ನಿಧನ

Suddi Udaya

ಹಾದಿಬೀದಿಯಲ್ಲಿ ಭಿಕ್ಷೆ ಬೇಡಿ ಕಾಲ ಕಳೆಯುತ್ತಿದ್ದ ವಯೋವೃದ್ಧೆ: ಅನಾಥೆಯಾದ ಅಜ್ಜಿಗೆ ಆಸರೆಯಾದ ಹೋಟೆಲ್ ಮಾಲಕ ರಮೇಶ್ ಕೋಟ್ಯಾನ್

Suddi Udaya
error: Content is protected !!