38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯ ಗೌರವ: ಕಾಂಬೋಡಿಯಾ ದೇಶದಲ್ಲಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023 ಸ್ವೀಕರಿಸಿ ಸ್ವದೇಶಕ್ಕೆ ಮರಳಿದ ಸಂಚಾಲಕ ರಾಜೇಶ್ ಪೈ ಉಜಿರೆ

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗೌರವ ಲಭಿಸಿದ್ದು ಕಾಂಬೋಡಿಯಾ ದೇಶದಲ್ಲಿ ಪ್ರಶಸ್ತಿ ಸ್ವೀಕರಿಸಿ ಸ್ವದೇಶಕ್ಕೆ ಹಿಂದಿರುಗಿದ ಟ್ರಸ್ಟ್ ನ ಸಂಚಾಲಕರು,ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈಯವರನ್ನು ಉಜಿರೆಯಲ್ಲಿ
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ,ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ರವರು ಗೌರವಿಸಿ, ಅಭಿನಂದಿಸಿದರು.

ಜಾಗತಿಕ ಸಾಧನೆಗೈದ ಕರ್ನಾಟಕದ ಅಪರೂಪದ ಸಾಧಕರಿಗೆ ಹಾಗೂ ಸಂಘ ಸಂಸ್ಥೆಗೆ ನೀಡುವ
ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023″ ಪ್ರಶಸ್ತಿಯನ್ನು ಕಾಂಬೋಡಿಯಾ ದೇಶದ ಅಂಕೋರ್ ಮಿರಾಕಲ್ ರೆಸಾರ್ಟ್,ಸಿಯಾಮ್ ರೀಪ್ ಸಭಾಂಗಣದಲ್ಲಿ ರಾಜೇಶ್ ಪೈ ಯವರು ಸ್ವೀಕರಿಸಿದ್ದರು.

ಈ ಸಂದರ್ಭದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನ್ ,ತಾ.ಪಂ ಮಾಜಿ ಸದಸ್ಯ ಶಶಿಧರ ಎಂ ಕಲ್ಮಂಜ, ಕಲ್ಮಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಧರ್ ಎಂ,ಪ್ರಮುಖರಾದ ರಾಘವೇಂದ್ರ ಎಂ,ತಾರೇಶ್ ದೇವಾಡಿಗ ಉಜಿರೆ ಉಪಸ್ಥಿತರಿದ್ದರು.

Related posts

ವೇಶ್ಯಾವಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸರಿಂದ ದಾಳಿ

Suddi Udaya

ವೇಣೂರು: ಕುಂಭಶ್ರೀ ಶಾಲೆಯ ಬಳಿ ಕಾರು ಹಾಗೂ ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕನಿಗೆ ಗಾಯ

Suddi Udaya

ವೇಣೂರು ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ : ತಿಥಿ ಕಾರ್ಯಕ್ರಮ ಪದಾಥ೯ಕ್ಕೆ ಬಡಿಸಲು ನಾಲ್ಕು ಆಮೆಗಳ ಬೇಟೆ: ನಾಲ್ಕು ಮಂದಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ದಿಂದ ವಿಧಾನಸಭಾ ಚುನಾವಣಾ ಪೂರ್ವ ತಯಾರಿ ಸಭೆ

Suddi Udaya
error: Content is protected !!