26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು: ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ: ಸ್ನೇಕ್ ಅಶೋಕ್ ರವರಿಂದ ಹೆಬ್ಬಾವು ರಕ್ಷಣೆ

ಬೆಳ್ತಂಗಡಿ : ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ಹಿಡಿದಿದ್ದು‌. ಈ ವೇಳೆ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರನ್ನು ಕರೆಸಿ ಎರಡು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ‌.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಅಂಗಳದಲ್ಲಿ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ ಬೇಟೆಯಾಡುತ್ತಿರುವಾಗ ಮನೆಯವರು ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರನ್ನು ಸ್ಥಳಕ್ಕೆ ಕರೆಸಿ ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.

ಹೆಬ್ಬಾವಿಗೆ ಸಣ್ಣಪುಟ್ಟ ಗಾಯವಾಗಿದ್ದು‌. ಅಪಾಯದಿಂದ ಪಾರಾಗಿದೆ. ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಸುರಕ್ಷಿತವಾಗಿ ಸ್ನೇಕ್ ಅಶೋಕ್ ಲಾಯಿಲರವರು ಕಾಡಿಗೆ ಬಿಟ್ಟಿದ್ದಾರೆ.

Related posts

ಧಮ೯ಸ್ಥಳ ಶವ ಹೂತಿಟ್ಟ ಪ್ರಕರಣ ವಿಧಾನಸಭಾ ಕಲಾಪದಲ್ಲಿ ಕಾವೇರಿದ ಚರ್ಚೆ: ಸಿದ್ದರಾಮಯ್ಯ ವಿರುದ್ದ 28 ಕೊಲೆ ಆರೋಪಕ್ಕೆ ಸರಕಾರದ ವಿರುದ್ಧ ಮುಗಿಬಿದ್ದ ವಿಪಕ್ಷ: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಕಾನೂನು ಕ್ರಮಕ್ಕೆ ಗೃಹ ಸಚಿವರ ಸೂಚನೆ

Suddi Udaya

ಸರಕಾರಿ ಬಸ್ಸಿನ ಗ್ಲಾಸಿಗೆ ಕಲ್ಲು ಎಸೆತ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನರಸಿಂಹಗಡದಲ್ಲಿ ಶ್ರೀ ಲಕ್ಷೀ ನರಸಿಂಹ ಉತ್ಸವ-ಧರ್ಮ ದೈವಗಳ ಪರ್ವಸೇವೆ

Suddi Udaya

ಬಳಂಜ: ಕಾಪಿನಡ್ಕ ರಬ್ಬರ್ ತೋಟದಲ್ಲಿ ಚಿರತೆ ಪ್ರತ್ಯಕ್ಷ

Suddi Udaya

ರೋಟರಿ ಸಮುದಾಯ ದಳ ಕಲ್ಮಂಜ ಘಟಕದ ಪದಾಧಿಕಾರಿಗಳ ಆಯ್ಕೆ

Suddi Udaya

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ. ಎನ್‌ಎಸ್‌ಎಸ್. ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!