24.6 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಧರ್ಮಸ್ಥಳದ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನ ಉದ್ಘಾಟನೆ

ಧರ್ಮಸ್ಥಳ: ಗಮಕ ಕನಾ೯ಟಕದ ವಿಶಿಷ್ಟ ಕಲೆಯಾಗಿದ್ದು, ಕವಿಗಳು ಬರೆದ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಗಮಕ ಮಾಡುತ್ತದೆ ಎಂದು ವಿದ್ವಾಂಸರು ಹಾಗೂ ಪ್ರಖ್ಯಾತ ಗಮಕಿಗಳಾದ ಬೆಂಗಳೂರಿನ ಡಾ.ಎ.ಬಿ ಪ್ರಸನ್ನ ಹೇಳಿದರು.

ಅವರು ಡಿ.12ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ನಡೆದ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಸ್ರೋ ಬೆಂಗಳೂರು ಇದರ ನಿದೇ೯ಶಕರು ಹಾಗೂ ವಿಜ್ಞಾನಿಗಳಾದ ರಾಮಕೃಷ್ಣ ಬಿ.ಎನ್ ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಇಸ್ರೋ ಚಂದ್ರಯಾನದಲ್ಲಿ ವಿಶೇಷ ಸಾಧನೆ ಮಾಡಿದ್ದು, ಚಂದ್ರನ ದಕ್ಷಿಣ ಭಾಗದಲ್ಲಿ ವಿಕ್ರಮ್ ನ್ನು ಲ್ಯಾಂಡಿಂಗ್ ಇಳಿಸಿದ ಮಹತ್ಕಾರ್ಯ ಮಾಡಿದೆ. ಪ್ರಧಾನಿ ಮೋದಿಯವರು ವಿಕ್ರಮ್ ಲ್ಯಾಂಡಿಂಗ್ ಆದ ಸ್ಥಳವನ್ನು” ಶಿವಶಕ್ತಿ” ಎಂದು ಕರೆದಿದ್ದಾರೆ ಎಂದರು.

5000ಕ್ಕೂ ಅಧಿಕ ಅಮೂಲ್ಯ ಹಸ್ತಪ್ರತಿಗಳ ಸಂಗ್ರಹ: ಡಾ.ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ, ಸಾಹಿತ್ಯ ಸಮಾಜಕ್ಕೆ ಹಿತವನ್ನುಂಟುಮಾಡುವುದು, ಹಿತ ಸಹಿತವಾದ ಅದು ಸಾಹಿತ್ಯ. ಅದರಲ್ಲೂ ಕಾವ್ಯ ಸಾಹಿತ್ಯಗಳ ಆತ್ಯಂತಿಕ ಹಿತ ಅದು ಆಧ್ಯಾತ್ಮಿಕ ಹಿತವನ್ನುಂಟುಮಾಡುವುದೇ ಆಗಿದೆ. ಅಂತಹ ಆಧ್ಯಾತ್ಮಿಕ ಹಿತವನ್ನು ಕಾವ್ಯ ಸಾಹಿತ್ಯ ಒದಗಿಸುತ್ತವೆ. ಅದಕ್ಕಾಗಿ ಸಾಹಿತ್ಯದ ರಚನೆ, ಪೋಷಣೆ, ಪ್ರಸಾರವಾಗಬೇಕು ಎಂದು ತಿಳಿಸಿದರು.

‘ಸಾಹಿತ್ಯ – ಸಂಸ್ಕೃತಿಯ ನೆಲೆ ‘ ಎಂಬ ವಿಷಯದಲ್ಲಿ ವಿಶ್ವಾಂತ ಪ್ರಾಧ್ಯಾಪಕರು ಮತ್ತು ಬರಹಗಾರರಾದ ಡಾ. ಶ್ರೀಪಾದ ಶೆಟ್ಟಿ ಹೊನ್ನಾವರ, ‘ರಂಗಭೂಮಿ ಮತ್ತು ಸಾಹಿತ್ಯ ಸಿರಿ’ ಎಂಬ ವಿಷಯದಲ್ಲಿ ರಂಗಕರ್ಮಿ ಪ್ರಕಾಶ್ ಬೆಳವಾಡಿ ಬೆಂಗಳೂರು, ‘ ಭಾಷೆ ಮತ್ತು ಸಾಹಿತ್ಯ ಪರಸ್ಪರ ‘ ಎಂಬ ವಿಷಯದಲ್ಲಿ ಲೇಖಕರು ಹಾಗೂ ಪ್ರಾಧ್ಯಾಪಕರಾದ ಡಾ. ಅಜ್ಜಕ್ಕಳ ಗಿರೀಶ್ ಭಟ್ ಬಂಟ್ವಾಳ ಉಪನ್ಯಾಸ ನೀಡಿದರು. ವಿನೂತನ ಮಾದರಿಯ ಹವಾನಿಯಂತ್ರಿತ ಪ್ರಾಥಮಿಕ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ರೂಪಿಸಲಾದ” ಸಂಚಾರಿ ಗ್ರಂಥಾಲಯ”ವನ್ನು ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ ಲೋಕಾರ್ಪಣೆ ಮಾಡಿದರು. ” ಬಾಲ ಬೋಧ” ಪುಸ್ತಕವನ್ನು ಇಸ್ರೋ ವಿಜ್ಞಾನಿ ಡಾ. ಎ.ವಿ ಪ್ರಸನ್ನ ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಾಪಣ್ಣ ಮತ್ತು ಗೆಳೆಯರು 3 ಸಾವಿರ ಭಗವದ್ಗೀತೆಯನ್ನು ಉಚಿತವಾಗಿ ವಿತರಿಸಿದರು. ಶ್ರೀ ಧ.ಮಂ ಕಾಲೇಜು ಉಜಿರೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಎಸ್.ಡಿ.ಎಂ ಸೊಸೈಟಿಯ ಪ್ರಾಜೆಕ್ಟ್ ಡೈರೆಕ್ಟರ್ ಡಿ.ಶ್ರೇಯಸ್ ಕುಮಾರ್, ಐ.ಟಿ ಸೆಲ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವಮ೯ ಸನ್ಮಾನ ಪತ್ರ ವಾಚಿಸಿದರು.‌ ಉಪನ್ಯಾಸಕರನ್ನು ಡಿ. ಹಷೇಂದ್ರ ಕುಮಾರ್ ಉಪನ್ಯಾಸಕರನ್ನು ಸನ್ಮಾನಿಸಿದರು.ನ್ಯಾಯವಾದಿ ಕೇಶವ ಗೌಡ ವಂದಿಸಿದರು.

ಡಾ. ದಿವಾ‌ ಕೊಕ್ಕಡ ಮತ್ತು ಡಾ. ರಾಜಶೇಖರ್ ಹಳೆಮನೆ ಕಾಯ೯ಕ್ರಮ ನಿರೂಪಿಸಿದರು.ರಾತ್ರಿ ಗುರುವಿದುಷಿ ಅರ್ಚನಾ ಪುಣ್ಯೇಷ್ ಮತ್ತು ವಿದ್ಯಾರ್ಥಿಗಳು ಜತಿನ್ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಶಿವಾರ್ಪಣಂ ಮತ್ತು ಹರಿವಿಲಾಸ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Related posts

ಜೂ.27: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್‌ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

Suddi Udaya

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಗೌರವಾರ್ಪಣೆ

Suddi Udaya

ಉಜಿರೆ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿಯಾಗಿ ಸುದೇಶ್ ಶೆಟ್ಟಿ ಆಯ್ಕೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಗುರುಮಿಠ್ಕಲ್ ಕ್ಷೇತ್ರದ ಶಾಸಕ ಶರಣ್ ಗೌಡ ಕಂದಕೂರ ಭೇಟಿ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya
error: Content is protected !!