32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುವ ವೇಳೆ ಮಹಿಳೆಯ ಕೊರಳಿನಿಂದ ರೂ.1.44 ಲಕ್ಷ ಮೌಲ್ಯದ 36 ಗ್ರಾಂ ಚಿನ್ನದ ಸರ ಕಳವು

ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆ ಎಸ್‌ ಆರ್‌ ಟಿ ಸಿ ಬಸ್ಸು ಹತ್ತುವ ಸಂದರ್ಭದಲ್ಲಿ ಮಹಿಳೆಯ ಕೊರಳಿನಲ್ಲಿ ಇದ್ದ 36 ಗ್ರಾಂ ಚಿನ್ನದ ಮಾಲೆಯನ್ನು ಯಾರೋ ಎಳೆದು ಕಳವುಗೈದಿರುವ ಘಟನೆ ಡಿ.12 ರಂದು ನಡೆದಿದೆ.

ಉಜಿರೆ ಗ್ರಾಮ ಬೆಳ್ತಂಗಡಿ ನಿವಾಸಿ ವಾರಿಜ ಟಿ. (53) ಎಂಬವರ ದೂರಿನಂತೆ, ಡಿ.12 ರಂದು ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆ ಎಸ್‌ ಆರ್‌ ಟಿ ಸಿ ಬಸ್ಸು ಹತ್ತುವಷ್ಟರಲ್ಲಿ ಮಹಿಳೆಯನ್ನು ಯಾರೋ ದೂಡಿ, ಅವರ ಕೊರಳಿನಲ್ಲಿ ಧರಿಸಿದ್ದ ಚಿನ್ನದ ಮಾಲೆಯನ್ನು ಯಾರೋ ಎಳೆದು ತೆಗೆದಿರುತ್ತಾರೆ. ಆ ಸಮಯ ಮಹಿಳೆಯು ಬೊಬ್ಬೆ ಹೊಡೆದಿದ್ದು ಸುಮಾರು ಜನ ಪ್ರಯಾಣಿಕರು ಇದ್ದುದರಿಂದ ಮಹಿಳೆಯ ಕುತ್ತಿಗೆಯಿಂದ ಯಾರು ಚಿನ್ನದ ಮಾಲೆಯನ್ನು ತೆಗೆದಿರುತ್ತಾರೆ ಎಂದು ತಿಳಿದಿರುವುದಿಲ್ಲ ಹಾಗೂ ಸದ್ರಿ ಚಿನ್ನದ ಮಾಲೆಯು 36 ಗ್ರಾಂ ಇದ್ದು ಅಂದಾಜು ಮೌಲ್ಯ ರೂ.1.44 ಲಕ್ಷ ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 120/2023 ಕಲಂ:392 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಉಳ್ತೂರಿನಲ್ಲಿ ಶಾಂತಿಯುತ ಬಕ್ರೀದ್ ಆಚರಣೆ

Suddi Udaya

ಪುಂಜಾಲಕಟ್ಟೆ- ಪುರಿಯ ಹದಗೆಟ್ಟ ರಸ್ತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಕೊಕ್ಕಡ ಅಮೃತ ಗ್ರಾಮ ಪಂಚಾಯತ್ ವತಿಯಿಂದ ಭಾರತೀಯ ಅಂಚೆ ಇಲಾಖೆ ಅಪಘಾತ ವಿಮೆ ನೋಂದಾವನಾ ಪ್ರಕ್ರಿಯೆ

Suddi Udaya

ಉಜಿರೆ: ಹಳೇಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪುತ್ತೂರಿನ ನೂತನ ಸಹಾಯಕ ಕಮಿಷನರ್ ಆಗಿ ಸ್ಟೆಲ್ಲಾ ವರ್ಗೀಸ್ ನಿಯುಕ್ತಿ

Suddi Udaya

ನಯನಾಡು: ಪಿಲಾತಬೆಟ್ಟು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ