ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ ವಾಣಿಜ್ಯ ಮತ್ತು ನಿರ್ವಹಣಾ ಸಂಘವು ಜಂಟಿಯಾಗಿ ಹೂಡಿಕೆದಾರರ ಜಾಗೃತಿಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಡಿ.12 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಘವ ಎನ್. ವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆಯನ್ನು ಸಿ.ಪಿ.ಎಫ್ SEBI ನೋಂದಾಯಿತ ಹೂಡಿಕೆಯ ಸಲಹೆಗಾರರಾದ ಲಿಯೋ ಅಮಲ್ ಇವರು ನೆರವೇರಿಸಿದರು.
ಉದ್ಘಾಟಕರು ಕಾರ್ಯಕ್ರಮವನ್ನು ಉದ್ದೇಶಿಸಿ ನಿಮ್ಮ ಭವಿಷ್ಯದ ಯೋಜನೆಗೆ ಅನುಗುಣವಾಗಿ ಹೂಡಿಕೆಯನ್ನು ಆಯ್ದುಕೊಳ್ಳಬೇಕೆಂದು ಸಲಹೆ ನೀಡಿದರು. ಆ ಬಳಿಕ ಸ್ವಪ್ನ ಶೆಣೈ ಅವರು ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸಿ ದೀರ್ಘಾವಧಿಯಲ್ಲಿ ಹೂಡಿಕೆಗೆ ಶೇರು ಆಗತ್ಯವಾದದ್ದು ಮತ್ತು ಅಲ್ಪಾವಧಿಯ ಹೂಡಿಕೆಗೆ ಸರ್ಕಾರಿ ಸಾಲ ಪತ್ರಗಳಲ್ಲಿ ಹೂಡುದು ಹಣ ಹೂಡಿಕೆ ಮಾಡುವುದು ಸೂಕ್ತವೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ.ಕೆ, ಕಾರ್ಯಾಗಾರದ ಸಂಯೋಜಕ ಹಾಗೂ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ.ರವಿ ಎಂ.ಎನ್ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪದ್ಮನಾಭ್, IQAC ಸಂಚಾಲಕರಾದ ಡಾ.ಕುಶಾಲಪ್ಪ , ನಿರ್ವಹಣಾ ವಿಭಾಗದ ಮುಖ್ಯಸ್ಥರಾದ. ಪ್ರೊ ರಶ್ಮಿ ಹಾಗೂ ಕಾರ್ಯಾಗಾರದ ಸಂಚಾಲಕಿ ಪ್ರೊ ರಾಜೇಶ್ವರಿ ಎಚ್ ಎಸ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ವೃಂದ ಪಾಲ್ಗೊಂಡಿದ್ದರು. ಶ್ರವಣ್ ಸ್ವಾಗತಿಸಿ, ಅಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.