ಕೊಕ್ಕಡ: ಉಪ್ಪಾರಪಳಿಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಇದರ ವಾರ್ಷಿಕೋತ್ಸವ ಮತ್ತು ನೂತನ ಕೊಠಡಿಗಳ ಉದ್ಘಾಟನೆ ಸಮಾರಂಭವು ಡಿ.9 ರಂದು ನಡೆಯಿತು
ಶ್ರೀ ಸುಬ್ರಹ್ಮಣ್ಯ ಉಪಾರ್ಣ ಉಪ್ಪಾರು ಇವರಿಂದ ಧ್ವಜಾರೋಹಣ ಬಳಿಕ ಲಘುಪಹಾರ ವಿತರಣೆ ಛದ್ಮವೇಶ ಸ್ಪರ್ಧೆಗಳು ನಡೆದವು.
ಸಂಜೆ ಸಭಾ ಕಾರ್ಯಕ್ರಮವು ಗ್ರಾಮ ಪಂಚಾಯಿತಿನ ಅಧ್ಯಕ್ಷ ಶ್ರೀಮತಿ ಬೇಬಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ನೂತನವಾಗಿ ನಿರ್ಮಿಸಲಾದ ವಿವೇಕ ಕೊಠಡಿಗಳನ್ನು ಶಾಸಕರಾದ ಹರೀಶ್ ಪೂಂಜ ರವರು ಉದ್ಘಾಟಿಸಿ ಶಾಲೆಯ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಯತ್ನಿಸುವೆನೆಂದು ಭರವಸೆ ಇತ್ತರು.
ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾಕೂಟದಂದು ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಧಾನ ಭಾಷಣಕಾರರಾದ ತ್ಯಾಂಪಣ್ಣ ಶೆಟ್ಟಿಗಾರ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಇತರೆ ಎಲ್ಲಾ ಸೌಲಭ್ಯಗಳಿಗಿಂತಲೂ ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರನ್ನು ಒದಗಿಸುವುದೇ ಅತ್ಯವಶ್ಯವಾದುದು ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ಶಾಲಾ ವಿದ್ಯಾರ್ಥಿನಿಯರಾದ ಜ್ಯೋತಿ ಲಿಖಿತ ಗಣ್ಯಶ್ರೀ ಮತ್ತು ಆಯಿಷತ್ ಸಹಲಾ ಇವರಿಂದ ಪ್ರಾರ್ಥನೆ ಬಳಿಕ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಆಲಂಬಿಲ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸರಸ್ವತಿ ಶಾಲೆಯ ವರದಿಯನ್ನು ವಾಚಿಸಿದರು. ಸಹ ಶಿಕ್ಷಕ ದಾಮೋದರ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹ ಶಿಕ್ಷಕಿ ವನಿತಾ ಎಂ.ಬಿ ಇವರು ವಂದನಾರ್ಪಣೆಗೈದರು.
ಸಹಶಿಕ್ಷಕಿ ಕ್ರಿಸ್ತಿನ್ ಮಾರ್ಟಿಸ್ ಇವರ ನಿರೂಪಣೆಯೊಂದಿಗೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು ಅಭಿನಯ ಕಲಾವಿದರು, ಕುಡ್ತಾ ಮುಗೇರು ವಿಟ್ಲ ಇವರಿಂದ ಈ ತೆರಿನಗ ಎನ್ನುವ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.