ಕುಕ್ಕೇಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಿತಾ ರವರ ಅಧ್ಯಕ್ಷತೆಯಲ್ಲಿ “ಮಕ್ಕಳ ಗ್ರಾಮ ಸಭೆ ” ಡಿ.12 ರಂದು ಜರುಗಿತು.
ಶಿಕ್ಷಣ ಇಲಾಖೆಯ ಶ್ರೀಮತಿ ಚೇತನಾಕ್ಷಿ ಮಾತನಾಡಿ ಮಕ್ಕಳ ಸ್ಥಿತಿಗತಿ ಅವರುಗಳ ಅಭಿವೃದ್ಧಿ, ಸಂವಿಧಾನಾತ್ಮಕವಾಗಿ ಒದಗಿಸಿರುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಆರೋಗ್ಯಕರ ಆಹಾರ, ಬೌದ್ಧಿಕ ಬೆಳವಣಿಗೆಗೆ ಆಟ ಪಾಠಗಳನ್ನು ವೈಜ್ಞಾನಿಕವಾಗಿ ರೂಪಿಸುವುದು, 3ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿ ಶಾಲೆಗಳಲ್ಲಿ ದಾಖಲಾತಿ ಶಿಕ್ಷಣ ಪ್ರಾರಂಭಿಸುವುದು, ಜೀತ ಪದ್ಧತಿ ನಿರ್ಮೂಲನೆ, ಹೆಣ್ಣು ಮಕ್ಕಳ ಪೋಷಣೆ ಮತ್ತು ರಕ್ಷಣೆ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಕುಮಾರಿ ರಮ್ಯಾ ಕೆ ಎಸ್ ಹಾಗೂ ಪೊಲೀಸ್ ಇಲಾಖೆಯ ಕೇಶವತಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ, ರಕ್ಷಣೆ, ಬಗ್ಗೆ ಸವಿವಿವಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಕುಸುಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಎ, ಪಂಚಾಯತ್ ಸದಸ್ಯರುಗಳು, ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರುಗಳು, ವಿದ್ಯಾರ್ಥಿ ನಾಯಕ ದೀಪೇಶ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಆನಂದ್ ಸ್ವಾಗತಿಸಿ, ಪಂ. ಅ. ಅಧಿಕಾರಿ ನವೀನ್ ಎ ವಂದಿಸಿದರು.