ಡಿ.17-19: ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಕ್ಷೇತ್ರದ ಷಷ್ಠೀ ಮಹೋತ್ಸವ

Suddi Udaya

ಮಡಂತ್ಯಾರು : ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ನಗರವಾದ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಮಡಂತ್ಯಾರು ಪೇಟೆಗೆ ಸಮೀಪವಿರುವ ತುಳುನಾಡಿನ ಪ್ರಸಿದ್ಧ ನಾಗಕ್ಷೇತ್ರ ಬಳ್ಳಮಂಜ. ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ಧಾಕೇಂದ್ರವಾಗಿರುತ್ತದೆ. ತುಳುನಾಡಿನ ಇತಿಹಾಸದ ಪ್ರಕಾರ ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ.


ವರ್ಷಂಪ್ರತಿಯಂತೆ ಜರಗುವ ಷಷ್ಠೀ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು.
ಡಿ.17ರಂದು ಪೂರ್ವಾಹ್ನ ಗಂಟೆ 8.೦೦ಕ್ಕೆ ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ ಗಂಟೆ 10.00ರಿಂದ ವಿದ್ವಾನ್ ಶ್ರೀ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಮತ್ತು ಬಳಗದವರಿಂದ ವೇಣುವಾದನ, ಅಪರಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7.00ಕ್ಕೆ ರಂಗಪೂಜೆ ಗಂಟೆ 8.00ರಿಂದ ಪಂಚಮಿ ಉತ್ಸವ ಡಿ.18ರಂದು ಪೂರ್ವಾಹ್ನ ಗಂಟೆ 7.00ರಿಂದ ಷಷ್ಠೀ ಉತ್ಸವ ಪ್ರಾರಂಭ ಗಂಟೆ 11.00ಕ್ಕೆ ಬ್ರಹ್ಮ ರಥೋತ್ಸವ, ಅಪರಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 7.00ಕ್ಕೆ ಕಟ್ಟೆ ಪೂಜೆ, ದರ್ಶನ ಬಲಿ ಡಿ.19ರಂದು ಮಹಾಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ (ಸೇವೆ: ಶ್ರೀಮತಿ ಜಾಜೀವಿ ಮತ್ತು ಶ್ರೀ ದುಗ್ಗಪ್ಪ ಗೌಡ ಹಾಗೂ ಮಕ್ಕಳು, ಪೊಸಂದೋಡಿ) ನಡೆಯಲಿದೆ ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಡಾ| ಯಂ. ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!