April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ ಗ್ರಾಮ‌ ಪಂಚಾಯತ್ ನಲ್ಲಿ ವಿಕಾಸಿತ ಭಾರತ ಸಂಕಲ್ಪ ಯಾತ್ರೆ

ಪಡಂಗಡಿ: ವಿಕಾಸಿತ ಭಾರತ ಸಂಕಲ್ಪ ಯಾತ್ರೆಯು ಪಡಂಗಡಿ ಗ್ರಾಮ‌ ಪಂಚಾಯತ್ ಗೆ ಆಗಮಿಸಿದಾಗ ಬಹಳ ಸಂಭ್ರಮದಿಂದ ಪೂರ್ಣ ಕುಂಭ ಮತ್ತು ಚೆಂಡೆಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಸುವರ್ಣ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೆನೇಜರ್ ಪದ್ಮನಾಭ ನಾಯಕ್ ಉದ್ಘಾಟಿಸಿದರು.

ವೇದಿಕೆಯಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಫನಾ ಬಾನು, ಉಪಾಧ್ಯಕ್ಷೆ ಶ್ರೀಮತಿ ವಸಂತಿ, ಕಾರ್ಯದರ್ಶಿ ತಾರನಾಥ ನಾಯಕ್, ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾವಯವ ಕೃಷಿಕ ಸುಬ್ರಮಣ್ಯ ಭಟ್ ,ವಸಂತಿ ಶೆಟ್ಟಿ ಪಾಲ್ತ್ಯಾರ್ ,ಪೋಷಣ್ ಯೋಜನೆ ಅಡಿಯಲ್ಲಿ ನಿಕಿಲ್, ಶ್ರೇಷ್ಟ ,ವೈಶಿಕ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಪ್ರಭಾರಿ ದಿನಕರ ಕುಲಾಲ್ , ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಿದ್ದರು.

Related posts

ಉಜಿರೆ ಮಹಾ ಶಕ್ತಿ ಕೇಂದ್ರದ ಯುವಮೋರ್ಚಾ ಸಂಚಾಲಕರಾಗಿ ಕಿರಣ್

Suddi Udaya

ಮಾ.9 : ಬೆಳ್ತಂಗಡಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ

Suddi Udaya

ಅರಸಿನಮಕ್ಕಿ: ಮೂಜಿನಾಡು ನಾರಾಯಣ ಟೈಲರ್ ನಿಧನ

Suddi Udaya

ಉಜಿರೆಯ ಎಸ್ ಎಲ್ ವಿ ಕನ್ಸ್ಟ್ರಕ್ಷನ್ ನ ಮಾಲಕ, ಸಿವಿಲ್ ಇಂಜಿನಿಯರ್ ಸಂಪತ್ ರತ್ನ ರಾವ್ ಅವರಿಗೆ ರಾಷ್ಟ್ರಮಟ್ಟದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪ್ರದಾನ

Suddi Udaya

ಅರಸಿನಮಕ್ಕಿ ಹೊಸ್ತೋಟ ಶಾಲಾ ಬಳಿ ಮರ ಬಿದ್ದು ರಸ್ತೆ ತಡೆ : ಅರಸಿನಮಕ್ಕಿ ನವಶಕ್ತಿಯ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ತೆರವು

Suddi Udaya

ಕೊಕ್ಕಡ: ಕಲಾಯಿ ನಿವಾಸಿ ತಿಮ್ಮಪ್ಪ ಗೌಡ ನಿಧನ

Suddi Udaya
error: Content is protected !!